ಕಾಂಗ್ರೆಸ್ ಸೇರಿದ ಸವದಿಯ ಕೈ ಹಿಡಿಯುತ್ತಾರಾ ಮತದಾರರು?

ಹೈ ವೋಲ್ಟೇಜ್‌  ಬೆಳಗಾವಿಯ ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ಗೆಲ್ಲುವರರು ಯಾರು?   ಬೆಳಗಾವಿಯ ಅಥಣಿ  ಜನರ ಒಲವು ಯಾರ ಕಡೆ? ಈ ಎಲ್ಲಾ ವಿಚಾರಗಳನ್ನು ಪಕ್ಷದ ಮುಖಂಡರು ನೇರಾನೇರ ಚರ್ಚೆ ನಡೆಸಿದ್ದಾರೆ. 
 

First Published May 2, 2023, 9:33 AM IST | Last Updated May 2, 2023, 10:50 AM IST

ರಾಜ್ಯದಲ್ಲಿ ವಿಧಾನಸಭೆಯ ಚುನಾವಣೆಯ ಕಾವು ಜೋರಾಗಿದ್ದು, ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಹೀಗಾಗಿ ಬೆಳಗಾವಿಯ ಅಥಣಿ  ರಣರೋಚಕ ಮೆಗಾಫೈಟ್‌ನ್ನು ಏಷ್ಯಾನೆಟ್​ ಸುವರ್ಣ ನ್ಯೂಸ್ ನಡೆಸಿದೆ. ಇಲ್ಲಿ ಘಟಾನುಘಟಿ ನಾಯಕರ ದಂಗಲ್ , ಕಾರ್ಯಕರ್ತರ ನಡುವೆ ಟಾಕ್ ವಾರ್ ನೋಡಬಹುದಾಗಿದೆ. ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌, ಪಾರ್ಟಿಯಿಂದ ನಾಯಕರು ವೇದಿಕೆಯಲ್ಲಿ ತಮ್ಮ ವಿಚಾರಗಳ ಮಂಥನ ನಡೆಸಿದ್ದಾರೆ. ಕಾಂಗ್ರೆಸ್‌'ನಿಂದ ಗಜಾನನ ಮನ್‌ಸೂಳಿ ಮತ್ತು ಸಿದ್ಧಾರ್ಥ ಸಿಂಗೆ, ಬಿಜೆಪಿಯಿಂದ ಲಿಂಗಪ್ಪ ನಂದೀಶ್ವರ ಮತ್ತು ಅನಿಲ್‌ ಸೌದ  ಜೆಡಿಎಸ್‌'ನಿಂದ  ಪ್ರಶಾಂತ್‌ ಬೆಳಂಕಿ, ಕೆಆರ್‌ಪಿಪಿ ಪಕ್ಷದಿಂದ ಬಸವರಾಜ ಬೀಸನಕೊಪ್ಪ ಮತ್ತು ಡಾ.ರಾಜ್‌ಕುಮಾರ್‌ ಯಲ್‌ಗಾಡ್‌, ಟಿಪ್ಪುಸುಲ್ತಾನ್‌ ಪಕ್ಷದಿಂದ ಪ್ರಮೋದ್‌ ಹೀರೆಮನ್‌ ಭಾಗಿಯಾಗಿದ್ದರು. ಇನ್ನು ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ಕುಮಟಳ್ಳಿಗೆ ಲಕ್ಷ್ಮಣ ರೇಖೆ..ಕಾಂಗ್ರೆಸ್ ಸೇರಿದ ಸವದಿಯ ಕೈ ಹಿಡಿಯುತ್ತಾರಾ ಅಥಣಿ ಮತದಾರರು?ಸವದಿ ಸಾಹುಕಾರ್ ಬಗ್ಗೆ ಅಥಣಿ ಕ್ಷೇತ್ರದ ಜನರು ಹೇಳಿದ್ದೇನು?ಈ ಬಾರಿ ಯಾರಾಗ್ತಾರೆ.. ಅಥಣಿ ಕ್ಷೇತ್ರದ ಅರಸ..?
ಪಕ್ಷದ ಮುಖಂಡರು ನೇರಾನೇರ ಚರ್ಚೆ ನಡೆಸಿದ್ದಾರೆ. ಈ ವಿಡಿಯೋ ಇಲ್ಲಿದೆ ನೋಡಿ.