Asianet Suvarna News Asianet Suvarna News

ಅಂದು ಗೋಹತ್ಯೆಗೆ ವಿರೋಧ, ಇಂದು ಗೋಪೂಜೆ; ಚುನಾವಣೆ ಹೊತ್ತಲ್ಲಿ ಪರಮೇಶ್ವರ್ ಹಿಂದೂ ಅಸ್ತ್ರ!

ಚುನಾವಣೆ ಹತ್ತಿರವಾಗುತ್ತಿದ್ದಂತೆ ಕಾಂಗ್ರೆಸ್‌ ಹಿಂದು ಅಸ್ತ್ರ ಹಿಡಿಯಲು ಆರಂಭಿಸಿದ್ದೆ. ಅಂದು ಗೋಹತ್ಯೆ ನಿಷೇಧ ಕಾಯ್ದೆಯನ್ನು ವಿರೋಧಿಸಿದ್ದ ಕಾಂಗ್ರೆಸ್‌ನ ಮಾಜಿ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್‌, ಇಂದು ಗೋಪೂಜೆ ಮಾಡುವ ಮೂಲಕ ಹಿಂದು ಜಪ ಆರಂಭಿಸಿದ್ದಾರೆ.
 

ಬೆಂಗಳೂರು (ನ.5): 2023ರ ವಿಧಾನಸಭೆ ಚುನಾವಣೆಗೆ ಅಜೆಂಡಾ ಫಿಕ್ಸ್‌ ಆಗುತ್ತಿದೆ. ಕಾಂಗ್ರೆಸ್‌ ಪಕ್ಷ ಕೂಡ ಹಿಂದು ಅಸ್ತ್ರವನ್ನು ಬಿಟ್ಟು ರಣರಂಗಕ್ಕೆ ಧುಮುಕಲು ಸಜ್ಜಾಗಿದೆ. ಅಂದು ಗೋಹತ್ಯೆ ನಿಷೇಧ ಕಾಯ್ದೆಯನ್ನು ವಿರೋಧಿಸಿದ್ದ ಕಾಂಗ್ರೆಸ್‌ ಪಕ್ಷದ ಪ್ರಮುಖ ನಾಯಕರೇ ಇಂದು ಗೋಪೂಜೆಯನ್ನು ಮಾಡುವ ಮೂಲಕ ಹಿಂದು ಜಪ ಆರಂಭಿಸಿದ್ದಾರೆ.

ಸೋಲು ತಪ್ಪಿಸಿಕೊಳ್ಳಲು ಜಿ.ಪರಮೇಶ್ವರ್ ಹಿಂದುತ್ವದ ಜಪ ಆರಂಭ ಮಾಡಿದ್ದಾರೆ. ಎಲೆಕ್ಷನ್ ಸಮೀಪವಾಗುತ್ತಿದ್ದಂತೆ ಹಿಂದೂ ಧರ್ಮದ ಗುಣಗಾನ ಮಾಡಿದ್ದಾರೆ. ಪರಂ ನೇತೃತ್ವದಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದು ಮಾತ್ರವಲ್ಲದೆ, ಗೋಪೂಜೆಯ ಮಹತ್ವವನ್ನು ಕೂಡ ಮಾಜಿ ಡಿಸಿಎಂ ಸಾರಿದ್ದಾರೆ.

ಚುನಾವಣೆ ಹೊಸ್ತಿಲಲ್ಲಿ Congress ನಾಯಕರಿಂದ ಹಿಂದುತ್ವ ಜಪ!

ಕೊರಟಗೆರೆ ಅಟವಿ ಮಠದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆದಿದೆ. ಅಟವಿ ಮಠದಲ್ಲಿ ಧರ್ಮಗೋಷ್ಠಿ,ಗೋಪೂಜೆ ಆಯೋಜನೆ ಮಾಡಲಾಗಿತ್ತು. ಹಿಂದೂಮತ ಸೆಳೆಯಲು ಮಾಜಿ ಡಿಸಿಎಂ ಪರಮೇಶ್ವರ ಮಾಡಿರುವ ರಣತಂತ್ರ ಇದು ಎಂದು ಹೇಳಲಾಗುತ್ತಿದೆ.

Video Top Stories