ಚುನಾವಣೆ ಹೊಸ್ತಿಲಲ್ಲಿ Congress ನಾಯಕರಿಂದ ಹಿಂದುತ್ವ ಜಪ!

ತುಮಕೂರು ಜಿಲ್ಲೆ ಕೊರಟಗೆರೆಯ ಅಟವಿ ಮಠದಲ್ಲಿ ಅವರು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಧರ್ಮಗೋಷ್ಠಿ ಹಾಗೂ ಗೋ ಪೂಜೆಯನ್ನು ಸಹ ಆಯೋಜನೆ ಮಾಡಲಾಗಿದೆ. ಇಷ್ಟೇ ಅಲ್ಲದೆ, ಹಿಂದೂ ಧರ್ಮ, ಗೋ ಪೂಜೆ ಬಗ್ಗೆ ಪರಮೇಶ್ವರ್‌ ಗುಣಗಾನವನ್ನೂ ಮಾಡಿದ್ದಾರೆ .

Share this Video
  • FB
  • Linkdin
  • Whatsapp

2023 ರ ರಾಜ್ಯ ಚುನಾವಣೆ ಹತ್ತಿರ ಬರುತ್ತಿದ್ದು, ಈ ಹಿನ್ನೆಲೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಲು ಕಾಂಗ್ರೆಸ್‌ ಸಹ ಹಿಂದುತ್ವ ಜಪ ಮಾಡುತ್ತಿದೆ. ಕಾಂಗ್ರೆಸ್‌ ಹಿರಿಯ ನಾಯಕ ಜಿ. ಪರಮೇಶ್ವರ್‌ ಹಿಂದೂ ಧರ್ಮದ ಜಪ ಮಾಡುತ್ತಿದ್ದಾರೆ. ಪರಮೇಶ್ವರ್‌ ಅವರ ನೇತೃತ್ವದಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮಗಳು ಏರ್ಪಾಡಾಗಿವೆ. ತುಮಕೂರು ಜಿಲ್ಲೆ ಕೊರಟಗೆರೆಯ ಅಟವಿ ಮಠದಲ್ಲಿ ಅವರು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಧರ್ಮಗೋಷ್ಠಿ ಹಾಗೂ ಗೋ ಪೂಜೆಯನ್ನು ಸಹ ಆಯೋಜನೆ ಮಾಡಲಾಗಿದೆ. ಇಷ್ಟೇ ಅಲ್ಲದೆ, ಹಿಂದೂ ಧರ್ಮ, ಗೋ ಪೂಜೆ ಬಗ್ಗೆ ಪರಮೇಶ್ವರ್‌ ಗುಣಗಾನವನ್ನೂ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಹಿಂದೂ ಧರ್ಮದ ಬಗ್ಗೆ ಸಮಾಜಕ್ಕೆ ಇನ್ನೊಮ್ಮೆ ತಿಳಿಸಬೇಕು ಎಂದೂ ಕಾಂಗ್ರೆಸ್‌ ನಾಯಕ ಜಿ. ಪರಮೇಶ್ವರ್‌ ಹೇಳಿದ್ದಾರೆ. 

Related Video