Nanna Votu Nanna Matu: ವಿಜಯಪುರದ ರಾಜಕೀಯ ಕಾರ್ಯಕರ್ತರು ಹೇಳೋದೇನು?

ನನ್ನ ವೋಟು ನನ್ನ ಮಾತು ಎಂಬ ವಿಶೇಷ ಕಾರ್ಯಕ್ರಮದಡಿ, ಗುಮ್ಮಟ ನಗರಿ ವಿಜಯಪುರದ ರಾಜಕೀಯ ಕಾರ್ಯಕರ್ತರು ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ.

Share this Video
  • FB
  • Linkdin
  • Whatsapp

ಚುನಾವಣೆ ಸಮೀಪಿಸಿದೆ. ರಾಜಕಾರಣಿಗಳು ಬಿಝಿ, ಜೊತೆಗೆ ಕಾರ್ಯಕರ್ತರೂ ಕೂಡಾ ಬಹಳ ಬಿಝಿ. ವಿಜಯಪುರದ ರಾಜಕೀಯ ಕಾರ್ಯಕರ್ತರು ಏನಂತಾರೆ? ನೊಡೋಣ ಬನ್ನಿ. ಐದು ವರ್ಷಗಳ ಸುವರ್ಣಕ್ಷಾರದಲ್ಲಿ ಬರೆಯುವಂತಹ ಅಭಿವೃದ್ದಿ ಕಾರ್ಯಗಳನ್ನು ಸಿದ್ದರಾಮಯ್ಯ ಅವರು 2013-2018ರಲ್ಲಿ ಮಾಡಿದ್ದಾರೆ. ಹಾಗೂ ಎಂ.ಬಿ.ಪಾಟೀಲ ಅವರು ವಿಜಯಪುರದಲ್ಲಿ ಮಾಡಿರುವಂತಹ ಅಭಿವೃದ್ದಿ ಕಾರ್ಯಗಳನ್ನು ಇಟ್ಟುಕೊಂಡು ನಾವು ಈ ಬಾರಿ ಚುನಾವಣೆಗೆ ಧುಮುಕುತ್ತಿದ್ದೇವೆ. ಹಾಗೂ ಬಿಜೆಪಿ ಸರ್ಕಾರವು ರೈತರಿಗೆ ಅನೂಕುಲವಾಗುವಂತಹ ಯಾವುದೇ ಕೆಲಸಗಳನ್ನು ಮಾಡಿಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರು ತಿಳಿಸಿದ್ದಾರೆ. ಇನ್ನು ಜೆಡಿಎಸ್ ಕಾರ್ಯಕರ್ತರು ಹೇಳುವ ಪ್ರಕಾರ, ನಾವು ಇಷ್ಟು ದಿನ ಸ್ಲಮ್ ಏರಿಯಾದಲ್ಲಿದ್ದೋರು. ನಮಗೆ ಯಾವುದೇ ಸವಲತ್ತು ಇರಲಿಲ್ಲ. ಅಲ್ಲದೇ ಇಲ್ಲಿನ ಎಂಎಲ್‌ಎ ಸಹ ಯಾವುದೇ ತರಹ ಸಪೋರ್ಟ್ ಮಾಡಿಲ್ಲ. ಹೀಗಾಗಿ ಚವ್ಹಾಣ್ ಸಾಹೇಬ್ರ ಬಳಿ ಹೋದಾಗ ಅವರು ನಮ್ಮ ಕರೆಗೆ ಅವರು ಸ್ಪಂದಿಸಿದರು ಎಂದು ಹೇಳಿದರು. 

Add Asianetnews Kannada as a Preferred SourcegooglePreferred

Related Video