ಅಧಿಕಾರವಿಲ್ಲದೆ ಜನರ ಮನಗೆದ್ದ ಗೋಪಾಲ್ ಕಾರಜೋಳ

ಗೋಪಾಲ್‌ ಕಾರಜೋಳ ಕಣ್ಣಿರಿಗೆ ಕರಗುವ ಹೃದಯವಂತ. ತಮ್ಮೂರ ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿರುವ ಲೀಡರ್‌.

First Published Jan 28, 2023, 6:19 PM IST | Last Updated Jan 28, 2023, 6:19 PM IST

ಗೋಪಾಲ್ ಕಾರಜೋಳ ಅವರು ಯಾವುದೇ ಸದ್ದು ಗದ್ದಲ ಇಲ್ಲದೇ ತಮ್ಮ ಪಾಡಿಗೆ ತಾವೇ ಜನರ ಸೇವೆ ಮಾಡುತ್ತಾ ಬಂದಿದ್ದಾರೆ. ಈ ಮೂಲಕ ತಮ್ಮೂರ ಜನರ ಮನಸ್ಸನ್ನು ಗೆದ್ದಿದ್ದಾರೆ. ಬಡವರ ಪಾಲಿಗೆ ಕೊಡುಗೈ ದಾನಿ ಎಂದು ಕರೆಸಿಕೊಂಡಿದ್ದಾರೆ. ನಾಗಠಾಣಾ ಕ್ಷೇತ್ರದ ಸಂಪರ್ಕಕ್ಕೆ ಬಂದು 5 ವರ್ಷವಾಗಿವೆ. ಇವರು ರಾಜಕಾರಣದಲ್ಲಿ ಗೆಲ್ಲದೇ ಹೋದ್ರೂ, ಜನರ ಹೃದಯವನ್ನು ಗೆದ್ದಾಗಿದೆ. ಇವರ ತಂದೆ ಗೊವಿಂದ ಕಾರಜೋಳ ಪ್ರಸ್ತುತ ರಾಜ್ಯ ಸರ್ಕಾರದಲ್ಲಿ ಜಲ ಸಂಪನ್ಮೂಲ ಸಚಿವರಾಗಿದ್ದಾರೆ. ಪ್ರಭಾವಿ ಕೂಡಾ ಹೌದು. ತಂದೆ ಮಿನಿಸ್ಟರ್‌ ಆಗಿದ್ರೂ ಇವರಿಗೆ ಯಾವುದೆ ದೊಡ್ಡಸ್ತಿಕೆ ಇಲ್ಲ.

ಭಾರತವನ್ನು ವಿಶ್ವದ ನಂ. 1 ದೇಶವನ್ನಾಗಿ ಮಾಡಿ: ಅಮಿತ್ ಶಾ ಕರೆ