Asianet Suvarna News Asianet Suvarna News

ಕೋಲಾರದಲ್ಲಿ ಸಿದ್ದರಾಮಯ್ಯ ಗೆಲ್ಲಲ್ಲ: ನಟ ಪ್ರಥಮ್ ಗ್ರೌಂಡ್ ರಿಪೋರ್ಟ್‌ನಲ್ಲಿ ಜನರ ಪ್ರತಿಕ್ರಿಯೆ

ರಾಜ್ಯ ವಿಧಾನಸಭಾ ಚುನಾವಣೆ ಕುರಿತು ಕೋಲಾರದ ಸಿಪುರದಲ್ಲಿ ನಟ ಪ್ರಥಮ್‌ ಗ್ರೌಂಡ್‌ ರಿಪೋರ್ಟ್ ನಡೆಸಿದ್ದು, ಅದರ ಡೀಟೇಲ್ಸ್ ಇಲ್ಲಿದೆ.

ಸಿದ್ದರಾಮಯ್ಯ ಕೋಲಾರಕ್ಕೆ ಬಂದ್ರೆ ಸೋತು ಹೋಗುತ್ತಾರೆ ಎಂದು ಅವರ ಮಗನೇ ಹೇಳಿದ್ದಾರೆ. ಕೋಲಾರದಲ್ಲಿ ಸಿದ್ದರಾಮಯ್ಯ ಗೆಲ್ಲಲ್ಲ ಎಂದು ಗ್ರೌಂಡ್ ರಿಪೋರ್ಟ್'ನಲ್ಲಿ ಅಲ್ಲಿನ ಜನತೆ ಪ್ರಥಮ್'ಗೆ ತಿಳಿಸಿದ್ದಾರೆ. ಕೋಲಾರದಲ್ಲಿ ಹುಟ್ಟಿ ಬೆಳೆದವರೇ ಗೆಲ್ಲಲು ಕಷ್ಟ, ಇನ್ನು ಎಲ್ಲಿಂದಲೋ ಬಂದು ವೋಟ್‌ ಕೇಳಿದ್ರೆ ಗೆಲ್ಲಲ್ಲ. ವರುಣ ಬಿಟ್ಟು ಕೋಲಾರಕ್ಕೆ ಬಂದಿರುವುದು ಲೋಕಲ್‌ ರಾಜಕೀಯ ವ್ಯಕ್ತಿಗಳಿಗೆ ತೊಂದರೆಯಾಗುತ್ತಿದೆ ಎಂದು ತಿಳಿಸಿದ್ದಾರೆ. ಕೋಲಾರ ಎಂದರೆ ಅಲ್ಪಸಂಖ್ಯಾತರು ಹಾಗೂ ಅಹಿಂದಾ ಓಟ್‌ ಬ್ಯಾಂಕ್‌. ಅಹಿಂದಾಗಳು ಸಿದ್ದರಾಮಯ್ಯ ಅವರನ್ನು ಗೆಲ್ಲಿಸುವುದಾಗಿ ಹೇಳಿದ್ದು, ಕೋಲಾರದ ಸಿಪುರದಲ್ಲಿ ಚುನಾವಣೆ ಕುರಿತು ಮಿಶ್ರ ಪ್ರತಿಕ್ರಿಯೆ ಬಂದಿದೆ.

ಚೆನ್ನಪಟ್ಟಣದಲ್ಲಿ ಕುಮಾರಣ್ಣನ ವರ್ಚಸ್‌ ಜಾಸ್ತಿಯಿದೆ: ನಟ ಪ್ರಥಮ್‌ಗೆ ಜನರು ಹೇಳಿದ್ದೇನು?

Video Top Stories