Asianet Suvarna News Asianet Suvarna News

ಚೆನ್ನಪಟ್ಟಣದಲ್ಲಿ ಕುಮಾರಣ್ಣನ ವರ್ಚಸ್‌ ಜಾಸ್ತಿಯಿದೆ: ನಟ ಪ್ರಥಮ್‌ಗೆ ಜನರು ಹೇಳಿದ್ದೇನು?

ಚನ್ನಪಟ್ಟಣದಲ್ಲಿ ನಟ ಪ್ರಥಮ್ ಗ್ರೌಂಡ್‌ ರಿಪೊರ್ಟ್‌ ಮಾಡಿದ್ದು, ಪ್ರಸ್ತುತ ರಾಜಕೀಯ ಸ್ಥಿತಿಗತಿ ಕುರಿತು ಜನರ ಅಭಿಪ್ರಾಯ ಸಂಗ್ರಹಿಸಿದ್ದಾರೆ.
 

ಚನ್ನಪಟ್ಟಣವು ಜಿದ್ದಾ ಜಿದ್ದಿನ ಕ್ಷೇತ್ರವಾಗಿದ್ದು, ಕಾಂಗ್ರೆಸ್‌ ಬಿಟ್ಟು ಬಿಜೆಪಿಗೆ ಬಂದ್ಮೇಲೆ ಸಿ.ಪಿ ಯೋಗಿಶ್ವರ್'ಗೆ ಇದು ಪ್ರತಿಷ್ಠೆಯ ಚುನಾವಣೆ ಆಗಿದೆ. ಇದು ಜೆಡಿಎಸ್ ಕುಮಾರಸ್ವಾಮಿ ಅವರ ಕ್ಷೇತ್ರ ಹಾಗೂ ಕಾಂಗ್ರೆಸ್‌'ನಿಂದ ಡಿ.ಕೆ ಶಿವಕುಮಾರ್‌ ಭಾವ ಈ ಬಾರಿ ನಿಲ್ಲುತ್ತಿದ್ದಾರೆ. ಈ ಕುರಿತು ನಟ ಪ್ರಥಮ್'ಗೆ ಜನರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಚೆನ್ನಪಟ್ಟಣದಲ್ಲಿ ಯೋಗಿಶ್ವರ್‌ 18 ವರ್ಷ ರಾಜಕೀಯ ಮಾಡಿದ್ದಾರೆ, ಸಚಿವರು ಆಗಿದ್ದಾರೆ ಅವರು ಕೆಲವು ಕೆಲಸಗಳನ್ನು ಮಾಡಿದ್ದಾರೆ, ಕೆಲವು ಕೆಲಸಗಳನ್ನು ಮಾಡಿಲ್ಲ. ಕುಮಾರಸ್ವಾಮಿ ಬಂದ ಮೇಲೆ ಕೆಲಸಗಳು, ರೋಡ್‌ಗಳು ಎಲ್ಲಾ ಆಗಿವೆ. ಕುಮಾರಸ್ವಾಮಿ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ. ಡಿಕೆ ಶಿವಕುಮಾರ್‌ ಪ್ರಭಾವವೂ ಈ ಕ್ಷೇತ್ರಕ್ಕೆ ಇದೆ. ಆದರೆ ಕುಮಾರಸ್ವಾಮಿ ವರ್ಚಸ್‌ ಜಾಸ್ತಿ ಇದೆ ಎಂದು ಅಲ್ಲಿನ ಜನರು ಅಭಿಪ್ರಾಯ ಪಟ್ಟಿದ್ದಾರೆ.

Video Top Stories