Asianet Suvarna News Asianet Suvarna News

ಹಾಸನ ಟಿಕೆಟ್‌ ಕದನಕ್ಕೆ ಬ್ರೇಕ್: ರೇವಣ್ಣ ಎಂಟ್ರಿ ಬೆನ್ನಲ್ಲೇ ತಾಯಿ-ಮಕ್ಕಳು ಸೈಲೆಂಟ್

ಹಾಸನದ ಜೆಡಿಎಸ್ ಟಿಕೆಟ್ ಕಗ್ಗಂಟು ವಿಚಾರಕ್ಕೆ ಸಂಬಂಧಿಸಿದಂತೆ, ಡ್ಯಾಮೇಜ್ ಕಂಟ್ರೋಲ್‌ ಮಾಡಲು ದೇವೇಗೌಡ್ರ ಕುಟುಂಬ ಮುಂದಾಗಿದೆ.

ಹಾಸನ ಟಿಕೆಟ್‌ ಕದನ ಡ್ಯಾಮೇಜ್‌ ಕಂಟ್ರೋಲ್‌ ಮಾಡಲು ದಳಪತಿ ಫ್ಯಾಮಿಲಿ ಮುಂದಾಗಿದೆ. ಟಿಕೆಟ್‌ ವಿಚಾರದ ಹೇಳಿಕೆ ಬಗ್ಗೆ ಸೂರಜ್‌ ರೇವಣ್ಣ ಅವರಿಂದ ಕುಮಾರಸ್ವಾಮಿ ಮಾಹಿತಿ ಪಡೆದಿದ್ದಾರೆ. ಟಿಕೆಟ್‌ ಘೋಷಣೆಗೂ ಮುನ್ನ ಬಹಿರಂಗ ಹೇಳಿಕೆ ನೀಡುವಾಗ ಎಚ್ಚರಿಕೆ ವಹಿಸುವಂತೆ ಹೆಚ್‌ಡಿಕೆ ಸಲಹೆ ನೀಡಿದ್ದಾರೆ. ರೇವಣ್ಣ ಎಂಟ್ರಿ ಬೆನ್ನಲ್ಲೇ ಭವಾನಿ ರೇವಣ್ಣ ಸೈಲೆಂಟ್‌ ಆಗಿದ್ದು, ಬಹಿರಂಗ ಹೇಳಿಕೆಯಿಂದ ತಾಯಿ ಮಕ್ಕಳು ಅಂತರ ಕಾಯ್ದುಕೊಂಡಿದ್ದಾರೆ. ಇತ್ತ ಕ್ಷೇತ್ರ ಪ್ರವಾಸಕ್ಕೂ ಭವಾನಿ ರೇವಣ್ಣ ತಾತ್ಕಾಲಿಕ ಬ್ರೇಕ್‌ ಹಾಕಿದ್ದು, ಭವಾನಿ ಪರ ಬ್ಯಾಟ್‌ ಬೀಸಿದ್ದ ಸೂರಜ್‌ ಹಾಗೂ ಪ್ರಜ್ವಲ್‌ ಗಪ್‌ ಚುಪ್‌ ಆಗಿದ್ದಾರೆ.

Video Top Stories