Asianet Suvarna News Asianet Suvarna News

ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ರಿಲೀಸ್ ವಿಳಂಬ?: ಬಂಡಾಯದ ಬೆಂಕಿಗೆ ರಾಜ್ಯ ಕಾಂಗ್ರೆಸ್‌ ನಡುಕ

ಕಾಂಗ್ರೆಸ್‌ ಪಕ್ಷಕ್ಕೆ ಟಿಕೆಟ್ ಹಂಚಿಕೆ ವಿಚಾರ ಕಗ್ಗಂಟಾಗಿ ಪರಿಣಮಿಸಿದ್ದು, ಬಂಡಾಯದ ಬೆಂಕಿಗೆ ರಾಜ್ಯ ಕಾಂಗ್ರೆಸ್‌  ಬೆಚ್ಚಿ ಬಿತ್ತಾ ಎಂಬ ಪ್ರಶ್ನೆ ಎದುರಾಗಿದೆ.
 

ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳ ಬಂಡಾಯ ಮುಂದುವರೆದಿದೆ. ಇದರ ನಡುವೆ ಫೆಬ್ರವರಿ 2ರಂದು ನಡೆಯುವ ರಾಜ್ಯದ ಚುನಾವಣಾ ಸಮಿತಿಯ ಸಭೆಯಲ್ಲಿ ಅಭ್ಯರ್ಥಿಗಳ ಪಟ್ಟಿ ಫೈನಲ್‌ ಆದ್ರೂ, ಮತ್ತೆರಡು ಹಂತ ದಾಟಬೇಕು. ದೆಹಲಿ ಮಟ್ಟದಲ್ಲಿ ಸ್ಕ್ರೀನಿಂಗ್‌ ಕಮಿಟಿ ರಚನೆ ಆಗಬೇಕು. ಜಿಲ್ಲಾ ಸಮಿತಿಗಳಿಂದ ವರದಿ ತರಿಸಿಕೊಳ್ಳುವುದು ವಿಳಂಬ ಆಗಿದ್ದು, ಡಿಸೆಂಬರ್‌ ತಿಂಗಳಿನಲ್ಲೇ ಮೊದಲ ಪಟ್ಟಿ ರಿಲೀಸ್‌ ಮಾಡುತ್ತೇವೆ ಅಂದಿದ್ದ ಕಾಂಗ್ರೆಸ್‌, ಬಳಿಕ ಸಂಕ್ರಾಂತಿ ನಂತರ ಘೋಷನೆ ಎಂದು ಹೇಳಿತ್ತು. ಅದು ಕೂಡ ಆಗಲಿಲ್ಲ. ಕೆಪಿಸಿಸಿ ಅಧ್ಯಕ್ಷರ ಡಿ.ಕೆ ಶಿವಕುಮಾರ್ ಡೆಡ್‌ ಲೈನ್‌ ನೀಡಿದ್ರೂ, ವರದಿ ವಿಳಂಬವಾಗಿದೆ. ಪ್ರಜಾಧ್ವನಿ ಯಾತ್ರೆಗೆ ಬಂಡಾಯ ಬಿಸಿ ತಟ್ಟುವ ಆತಂಕ ಎದುರಾಗಿದೆ. ಫೆ. 3ರಿಂದ ಡಿಕೆಶಿ ಹಾಗೂ ಸಿದ್ದರಾಮಯ್ಯ ಪ್ರತ್ಯೇಕ ಬಸ್‌ ನಡೆಸಲಿದ್ದು, ಬಸ್‌ ಯಾತ್ರೆಗೂ ಬಂಡಾಯದ ಬಿಸಿ ತಟ್ಟುವ ಸಾಧ್ಯತೆ ಇದೆ.

ಬಡತನ ಅರಿತವರನ್ನು ಆಯ್ಕೆ ಮಾಡಿ: ಕುಡತಿನಿಯಲ್ಲಿ ಕುಮಾರಸ್ವಾಮಿ ಕರೆ

Video Top Stories