ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ: ಚುನಾವಣೆಯ ತಂತ್ರದ ಬಗ್ಗೆ ಪ್ರಲ್ಹಾದ್ ಜೋಶಿ ಹೇಳಿದ್ದೇನು?

ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ದೆಹಲಿ ಮತ್ತು ಕರ್ನಾಟಕದ ಲಿಂಕ್'ನ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿದ್ದಾರೆ.

First Published Jan 26, 2023, 4:14 PM IST | Last Updated Jan 26, 2023, 4:14 PM IST

ರಾಜ್ಯದಲ್ಲಿ ಬಿಜೆಪಿ ಮೆಜೊರಿಟಿಯಲ್ಲಿ ಬರುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದರು. ಚುನಾವಣೆಗೆ ಬೇಕಾದ ತಯಾರಿಯನ್ನು ಬಿಜೆಪಿ ಮಾಡುತ್ತಿದೆ. ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಅವರು ತಿಳಿಸಿದರು. ಭಾರತೀಯ ಜನತಾ ಪಾರ್ಟಿಗೂ ಬೇರೆ ಪಾರ್ಟಿಗೂ ಒಂದು ವ್ಯತ್ಯಾಸ ಇದೆ. ಬಿಜೆಪಿಯಲ್ಲಿ ಯಡಿಯೂರಪ್ಪನವರು ಇವತ್ತಿನವರೆಗೂ ಕೆಲಸ ಮಾಡುತ್ತಾರೆ. ಬೇರೆ ಪಾರ್ಟಿಗಳಲ್ಲಿ ಅವರು ಮುಖ್ಯಮಂತ್ರಿ ಇಲ್ಲ ಅಥವಾ ಪ್ರಧಾನಮಂತ್ರಿ ಇಲ್ಲ ಅಂದ್ರೆ ಕೆಲಸ ಮಾಡಲ್ಲ ಎಂದರು. ಯಡಿಯೂರಪ್ಪನವರು ಹಿರಿಯ ಮುಖಂಡರು, ಅವರು ಎಲ್ಲದರಲ್ಲೂ ಸಕ್ರಿಯವಾಗಿ ಭಾಗವಹಿಸುತ್ತಾರೆ. ಕರ್ನಾಟಕಕ್ಕೆ ಸಂಬಂಧಿಸಿದಂತೆ ಹಲವು ವಿಷಯಗಳನ್ನು ನನ್ನ ಜೊತೆ ಚರ್ಚೆಯನ್ನು ಮಾಡಿದ್ದಾರೆ ಎಂದು ಹೇಳಿದರು. ಒಟ್ಟಾರೆ  ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾಗಿನಿಂದಲೂ ಹೆಚ್ಚು ಕೆಲಸವನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.