2ನೇ ಪಟ್ಟಿ ಬಿಡುಗಡೆಗೆ ಕಾದು ನೋಡುವ ತಂತ್ರದ ಮೊರೆ ಹೋದ ಎಚ್‌ಡಿಕೆ..!

ಕರ್ನಾಟಕ ಕುರುಕ್ಷೇತ್ರಕ್ಕೆ ದಳಪತಿಗಳ ರಂಗತಾಲೀಮು ಶುರು ಆಗಿದ್ದು, 2ನೇ ಪಟ್ಟಿ ಘೋಷಣೆ ವಿಚಾರದಲ್ಲಿ ಜೆಡಿಎಸ್‌ ಜಾಣನಡೆ ನಡೆ ಇಡುತ್ತಿದೆ.

Share this Video
  • FB
  • Linkdin
  • Whatsapp

ಕರ್ನಾಟಕ ಕುರುಕ್ಷೇತ್ರಕ್ಕೆ ದಳಪತಿಗಳ ರಂಗತಾಲೀಮು ಶುರು ಆಗಿದ್ದು, ಪಟ್ಟಿ ರೆಡಿಯಾಗಿದ್ರೂ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. 2ನೇ ಪಟ್ಟಿ ಘೋಷಣೆ ವಿಚಾರದಲ್ಲಿ ಜೆಡಿಎಸ್‌ ಜಾಣನಡೆ ನಡೆಯುತ್ತಿದ್ದು,ಎಲ್ಲಾ ಕ್ಷೇತ್ರದಲ್ಲಿ ಸರ್ವೆ ನಡೆಸಿ 2ನೇ ಪಟ್ಟಿ ಅಂತಿಮವಾಗಿ ಬಿಡುಗಡೆ ಮಾಡಲಿದೆ. ಇನ್ನು ಜಿಲ್ಲಾ ಮಟ್ಟದಲ್ಲಿ ವರದಿ ಪಡೆದು ಅಭ್ಯರ್ಥಿ ಹೆಸರು ಫೈನಲ್‌ ಮಾಡಲಿದೆ. ಅದಲ್ಲದೆ ಉ.ಕರ್ನಾಟಕ, ಕರಾವಳಿ ಭಾಗದಲ್ಲಿ ಜೆಡಿಎಸ್‌ಗೆ ಪ್ರಬಲ ಅಭ್ಯರ್ಥಿಗಳ ಕೊರತೆ ಇದ್ದು , ಬಿಜೆಪಿ ,ಕಾಂಗ್ರೆಸ್‌ ಟಿಕೆಟ್‌ ವಂಚಿತರು ಜೆಡಿಎಸ್‌ನತ್ತ ಮುಖ ಮಾಡುವ ಸಾಧ್ಯತೆ ಇದೆ. ಅಭ್ಯರ್ಥಿಗಳ ಕೊರತೆ ಇರುವ ಕ್ಷೇತ್ರದಲ್ಲಿ ವಲಸಿಗರಿಗೆ ಟಿಕೆಟ್‌ ನೀಡಲು ದಳ ಪ್ಲಾನ್‌ ಮಾಡಿದೆ.

Related Video