ರಮೇಶ್ ಜಾರಕಿಹೊಳಿ ಕ್ಷೇತ್ರದಲ್ಲಿ ಸಂಚಲನ: ನಾಮಪತ್ರ ವಾಪಸ್ ಪಡೆದ ಜೆಡಿಎಸ್ ಅಭ್ಯರ್ಥಿ
ಸೋಲಿಲ್ಲದ ಸರದಾರ ರಮೇಶ್ ಜಾರಕಿಹೊಳಿ ಕಟ್ಟಿಹಾಕಲು ವಿರೋಧಿಗಳು ತಂತ್ರ ಹೂಡಿದಂತೆ ಕಾಣುತ್ತಿದೆ. ಇದೀಗ ಜೆಡಿಎಸ್ ಅಭ್ಯರ್ಥಿ ನಾಮಪತ್ರವನ್ನು ಹಿಂಪಡೆದಿದ್ದಾರೆ.
ಬೆಳಗಾವಿ: ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಗೋಕಾಕ್‌ನ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಸೋಲಿಸಲು ವಿರೋಧಿಗಳು ಸ್ಕೆಚ್ ಹಾಕಿದಂತೆ ಕಾಣುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತಿದೆ ಜೆಡಿಎಸ್ ಅಭ್ಯರ್ಥಿ ಚಂದನ್ ಗಿಡ್ನವರ್ ನಾಮಪತ್ರ ಹಿಂಪಡೆದಿರುವುದು. ಈ ಮೂಲಕ ವಿರೋಧಿಗಳು ರಮೇಶ್ ಜಾರಕಿಹೊಳಿ ಕಟ್ಟಿಹಾಕಲು ಒಂದಾದ್ರ ಎಂಬ ಪ್ರಶ್ನೆ ಇದೀಗ ಮೂಡಿದೆ. ಹೀಗೆ ಒಬ್ಬ ನಾಯಕನನ್ನು ಕಟ್ಟಿ ಹಾಕುವ ಉದ್ದೇಶವೇನಂದ್ರೆ, ಆತ ಬೇರೆ ಕ್ಷೇತ್ರಗಳಲ್ಲಿ ಪ್ರಚಾರ ಮಾಡುವುದನ್ನು ತಡೆಯುವುದಾಗಿದೆ. ರಮೇಶ್ ಜಾರಕಿಹೊಳಿ 3 ರಿಂದ 4 ಕ್ಷೇತ್ರಗಳಲ್ಲಿ ಗೆಲ್ಲುವುದಾಗಿ ಹೇಳಿ, ಅವರ ಪರ ಇರುವವರಿಗೆ ಟಿಕೆಟ್ ಕೊಡಿಸಿದ್ದಾರೆ.
ಇದನ್ನೂ ವೀಕ್ಷಿಸಿ: ಕರುನಾಡ ಕುರುಕ್ಷೇತ್ರದಲ್ಲಿ 'ಕೇಸರಿ' ಅಸಲಿ ಆಟ ಶುರು: 3 ದಿನ, 98 ನಾಯಕರು, 224 ಕ್ಷೇತ್ರಗಳಲ್ಲಿ ಅಬ್ಬರದ ಪ್ರಚಾರ