ಕರುನಾಡ ಕುರುಕ್ಷೇತ್ರದಲ್ಲಿ 'ಕೇಸರಿ' ಅಸಲಿ ಆಟ ಶುರು: 3 ದಿನ, 98 ನಾಯಕರು, 224 ಕ್ಷೇತ್ರಗಳಲ್ಲಿ ಅಬ್ಬರದ ಪ್ರಚಾರ

ರಾಜ್ಯದಲ್ಲಿ ಅಮಿತ್‌ ಶಾ, ರಾಜನಾಥ್‌ ಸಿಂಗ್‌, ಜೆ.ಪಿ. ನಡ್ಡಾ ನೇತೃತ್ವದಲ್ಲಿ, ಬಿಜೆಪಿಯ  98 ನಾಯಕರು ಪ್ರಚಾರ ಮಾಡಲಿದ್ದಾರೆ.

First Published Apr 25, 2023, 12:03 PM IST | Last Updated Apr 25, 2023, 12:03 PM IST

ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ಪ್ರಚಾರವನ್ನು ಮಾಡುತ್ತಿದೆ. ಇಂದಿನಿಂದ ರಣಕಣಕ್ಕೆ ಮೋದಿ ಸೈನ್ಯ ಎಂಟ್ರಿ ಆಗಲಿದೆ. ಮೂರು ದಿನ 98 ನಾಯಕರು ರಾಜ್ಯದ 224 ಕ್ಷೇತ್ರಗಳಲ್ಲಿ ಅಬ್ಬರದ ಪ್ರಚಾರ ನಡೆಸಲಿದ್ದಾರೆ. ಕಾರ್ಪೆಟ್‌ ಬಾಂಬಿಂಗ್‌ ಮಾದರಿಯಲ್ಲಿ ಬಿಜೆಪಿ ಪ್ರಚಾರ ಮಾಡಲಿದೆ.  ಕೇಂದ್ರ ಗೃಹ ಸಚಿವ ಅಮಿತ್‌ ಶಾ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ನೇತೃತ್ವದಲ್ಲಿ ಕ್ಯಾಂಪೇನ್‌ ನಡೆಯಲಿದೆ. ಈ ನಾಯಕರುಗಳ ಜೊತೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಸಾಥ್‌ ನೀಡಲಿದ್ದಾರೆ. ಯೋಗಿ ಮಂಡ್ಯ, ವಿಜಯಪುರ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದಾರೆ. ಹೀಗೆ ಹಲವಾರು ಬಿಜೆಪಿ ನಾಯಕರು ರಾಜ್ಯದಾದ್ಯಂತ ಪ್ರಚಾರವನ್ನು ಮಾಡಲಿದ್ದಾರೆ. 

ಇದನ್ನೂ ವೀಕ್ಷಿಸಿ: ಜೆಡಿಎಸ್‌ನವರು ಕಾಂಗ್ರೆಸ್ ಪರ ವೋಟ್ ಕೇಳ್ತಿದ್ದಾರೆ: ಸಿಟಿ ರವಿ ಆರೋಪ

Video Top Stories