Asianet Suvarna News Asianet Suvarna News

JDS ಸಭೆಗೆ ಗೈರಾದವರ ಮುಂದಿನ ನಡೆ ಏನು..? ಮೈತ್ರಿಯಿಂದ ಹುಟ್ಟಿದ್ದ ಅಸಮಾಧಾನ ತಣ್ಣಗಾಯ್ತಾ..?

JDS ವರಿಷ್ಠರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮೈತ್ರಿ ಮಾತು 
ನಿನ್ನೆ ಸಭೆಯಲ್ಲಿ ಅಲ್ಪಸಂಖ್ಯಾತರ ಮನಸ್ಸು ಬದಲಾಯ್ತಾ..? 
ಒಟ್ಟಾರೆ ಇಂದಿನ ಸಭೆಯ ಮುಖ್ಯ ಫಲಿತಾಂಶಗಳೇನು..?
ಮೈತ್ರಿ ಬಗ್ಗೆ ಎಲ್ಲರ ಬೆಂಬಲವಿದೆ ಎಂದು ಹೇಳಿದ ಎಚ್ಡಿಕೆ
 

ಜೆಡಿಎಸ್ ಪಕ್ಷ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದೆ. ಎಚ್. ಡಿ.  ಕುಮಾರಸ್ವಾಮಿಯವರು ಲೋಕಸಭೆ(Loksabha) ಎಲೆಕ್ಷನ್ ಗಮನದಲ್ಲಿಟ್ಟುಕೊಂಡು ಈ ಹೆಜ್ಜೆಯನ್ನಿಟ್ಟಿದ್ದಾರೆ. ಎಚ್‌ಡಿಕೆ ಅವ್ರ ಈ ನಡೆಯಿಂದ ರಾಜ್ಯದ ಪ್ರಮುಕ ಜೆಡಿಎಸ್ ನಾಯಕರು ಮುನಿಸಿಕೊಂಡಿದ್ದಾರೆ. ಬಹಿರಂಗವಾಗಿನೇ ನೋವು ತೋಡಿಕೊಂಡಿದ್ದಾರೆ. ಈ ನೋವು ತೋಡಿಕೊಂಡವರಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಕೂಡ ಹೌದು. ಹೀಗಾಗಿ, ಪಕ್ಷದಲ್ಲಿನ ಅಸಮಾಧಾನವನ್ನು ತಿಳಿಗೊಳಿಸಲು ಜೆಡಿಎಸ್ ಅತೃಪ್ತ ನಾಯಕರ ಸಭೆ ಕರೆದಿತ್ತು. ಮುಂಬರಲಿರುವ ಲೋಕಸಭಾ ಚುನಾವಣೆಗೆ, ಜೆಡಿಎಸ್(JDS) ಮತ್ತು ಬಿಜೆಪಿ(BJP) ಪಕ್ಷಗಳ ಮೈತ್ರಿಯಾಗಿದೆ. ಈ ಮೈತ್ರಿಯಿಂದಾಗಿ ಜೆಡಿಎಸ್ ಪಕ್ಷದೊಳಗೆ ಅಸಮಾಧಾನ ಬುಗಿಲೆದಿದ್ದೆ. ಬಿಜೆಪಿ ಜೊತೆಗಿನ ಮೈತ್ರಿಯಿಂದಾಗಿ, ಬೇಸರಗೊಂಡು ಕೆಲವರು ಪಕ್ಷ ತೊರೆಯುತ್ತಿದ್ದಾರೆ. ಇನ್ನು ಕೆಲವರು ಬಹಿರಂಗವಾಗಿನೇ ನೋವು ಮೈತ್ರಿಯನ್ನು ವಿರೋಧಿಸಿದ್ದಾರೆ. ಜೆಡಿಎಸ್ ಬಿಜೆಪಿ ಮೈತ್ರಿ ನಂತರ, ಪ್ರಮುಖ ಜೆಡಿಎಸ್ ನಾಯಕರು ಅಸಮಾಧಾನ ಹೊರ ಹಾಕಿದ್ದರು. ಕೆಲವರು ಪಕ್ಷ ತೊರೆಯುವ ಮಾತುಗಳನ್ನಾಡಿದ್ದರು. ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡ ಮೇಲೆ ಜೆಡಿಎಸ್ನ ಅನೇಕ ಅಲ್ಪಸಂಖ್ಯಾತ ನಾಯಕರು ಮತ್ತು ಕಾರ್ಯಕರ್ತರು ತುಂಬಾನೇ ನೊಂದುಕೊಂಡಿದ್ದಾರೆ. ನೊಂದವರಲ್ಲಿ ಕೆಲವರು ಈಗಾಗ್ಲೇ ಪಕ್ಷವನ್ನೆ ತೊರೆದಿದ್ದಾರೆ. ಹೀಗಾಗಿ, ಮೈತ್ರಿ ಬೇಸರ ಬಹಿರಂಗವಾಗಿಯೇ ಹೊರಬೀಳುತ್ತಿದ್ದಂತೆ. ಕಾಂಗ್ರೆಸ್(Congress) ಪಕ್ಷದ ಅವರ ಲಾಭಕ್ಕೆ ಮುಂದಾಯ್ತು. ಯಾರಿಗೆಲ್ಲ ಜೆಡಿಎಸ್ ಬೇಡವೋ ಅವರೆಲ್ಲ ಕಾಂಗ್ರೆಸ್‌ಗೆ ಬರಬಹುದೆಂದು ಕಾಂಗ್ರೆಸ್ ಆಹ್ವಾನ ಕೊಟ್ಟಿತು. ಹೀಗೆ ಬಿಟ್ರೆ ಸರಿ ಇರೋದಿಲ್ಲ ಎಂದುಕೊಂಡ ಜೆಡಿಎಸ್ ವರಿಷ್ಠರು, ಇಂದು ಅಸಮಾಧಾನಗೊಂಡವರನ್ನು ಸಮಾಧಾನ ಮಾಡುವ ಉದ್ದೇಶದಿಂದ. ಮೈತ್ರಿ ಅನಿವಾರ್ಯವನ್ನು ಅವರಿಗೆಲ್ಲ ತಿಳಿಸಿ ಹೇಳುವ ಉದ್ದೇಶದಿಂದ ಜೆಡಿಎಸ್ ಸಭೆಯನ್ನು ಕರೆಯಲಾಗಿತ್ತು. 

ಇದನ್ನೂ ವೀಕ್ಷಿಸಿ:  ಸ್ಯಾಂಡಲ್‌ವುಡ್ ಯುವ ನಟರ ಸಮಾಗಮ: ನಿಖಿಲ್ ಸಿನಿಮಾ ಶೂಟಿಂಗ್ ಸೆಟ್‌ನಲ್ಲಿ ಧ್ರುವ ? ಏನಿದು ಗಾಸಿಪ್‌ ?

Video Top Stories