ಎನ್‌ಡಿಎ ಮೈತ್ರಿಕೂಟದ ಭಾಗವಾಗ್ತಾರಾ ಜನಾರ್ದನ ರೆಡ್ಡಿ..? ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸುತ್ತಾರಾ ?

ಬಿಜೆಪಿ ಸೇರಲ್ಲ ಎಂದಿದ್ದ ರೆಡ್ಡಿಯಿಂದ ಅಮಿತ್ ಶಾ ಭೇಟಿ
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸುತ್ತಾರಾ ರೆಡ್ಡಿ?
ರಾಯಚೂರು, ಬಳ್ಳಾರಿಯಲ್ಲಿ ಪ್ರಭಾವ ಹೊಂದಿರುವ ರೆಡ್ಡಿ!

Share this Video
  • FB
  • Linkdin
  • Whatsapp

ದೆಹಲಿಯಲ್ಲಿ ರಾಜ್ಯ ರಾಜಕೀಯದ ಮಿಂಚಿನ ಬೆಳವಣಿಗೆ ಆಗಿದೆ. ಗೃಹ ಸಚಿವ ಅಮಿತ್ ಶಾರನ್ನು(Amit Shah) ಶಾಸಕ ಜನಾರ್ದನ ರೆಡ್ಡಿ ಭೇಟಿಯಾಗಿದ್ದಾರೆ. ಹೀಗಾಗಿ ಜನಾರ್ದನ ರೆಡ್ಡಿ(Janardhana Reddy) ಎನ್‌ಡಿಎ ಮೈತ್ರಿಕೂಟದ(NDA Alliance) ಭಾಗವಾಗ್ತಾರಾ ಎಂಬ ಪ್ರಶ್ನೆ ಎಲ್ಲಾರನ್ನು ಕಾಡುತ್ತಿದೆ. ಬಿಜೆಪಿ ಸೇರಲ್ಲ ಎಂದಿದ್ದ ರೆಡ್ಡಿ ಇದೀಗ ಅಮಿತ್ ಶಾ ಭೇಟಿಯಾಗಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಜನಾರ್ದನ ರೆಡ್ಡಿ ಬೆಂಬಲಿಸುತ್ತಾರೆ ಎನ್ನಲಾಗ್ತಿದೆ. ರಾಯಚೂರು, ಬಳ್ಳಾರಿಯಲ್ಲಿ ರೆಡ್ಡಿ ಭಾರೀ ಪ್ರಭಾವವನ್ನು ಹೊಂದಿದ್ದಾರೆ. ಇತ್ತೀಚೆಗಷ್ಟೇ ರಾಜ್ಯಸಭಾ ಚುನಾವಣೆಯಲ್ಲಿ(Rajyasabha) ಕಾಂಗ್ರೆಸ್(Congress) ಪರ ರೆಡ್ಡಿ ಮತ ಚಲಾವಣೆ ಮಾಡಿದ್ದಾರೆ. 20 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾದ ಬೆನ್ನಿಗೇ ಅಮಿತ್ ಶಾ ಭೇಟಿ ಮಾಡಿದ್ದಾರೆ. 

ಇದನ್ನೂ ವೀಕ್ಷಿಸಿ: ಹಲವು ರಾಜ್ಯಗಳಲ್ಲಿ ಕ್ಲೀನ್ ಸ್ವೀಪ್ ಮಾಡುತ್ತಾ ಎನ್‌ಡಿಎ..? ಹಿಂದಿ ರಾಜ್ಯಗಳಲ್ಲಿ ಮತ್ತೊಮ್ಮೆ ಮೋದಿ ಮೋಡಿ ಮಾಡ್ತಾರಾ..?

Related Video