ಯಡಿಯೂರಪ್ಪಗೆ ಜೈ, ವಿಜಯೇಂದ್ರಗೆ ಗುದ್ದು! ಇದು ಸೋಮಣ್ಣ ಸ್ಟೈಲ್!

ವಸತಿ ಸಚಿವ ವಿ. ಸೋಮಣ್ಣ ಅವರು ದೆಹಲಿಗೆ ಹೀಗಿ ಬಿಜೆಪಿ ಹೈಕಮಾಂಡ್‌ ಭೆಟಿಯಾಗಿ ಬಂದರೂ ಸಿಟ್ಟು ತಣ್ಣಗಾಗಿಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್, ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ವಿರುದ್ಧ ವಿ.ಸೋಮಣ್ಣ ಸಿಟ್ಟು ಮುಂದುವರೆಸಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು (ಮಾ.16): ವಸತಿ ಸಚಿವ ವಿ. ಸೋಮಣ್ಣ ಅವರು ದೆಹಲಿಗೆ ಹೀಗಿ ಬಿಜೆಪಿ ಹೈಕಮಾಂಡ್‌ ಭೆಟಿಯಾಗಿ ಬಂದರೂ ಸಿಟ್ಟು ತಣ್ಣಗಾಗಿಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್, ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ವಿರುದ್ಧ ವಿ.ಸೋಮಣ್ಣ ಸಿಟ್ಟು ಮುಂದುವರೆಸಿದ್ದಾರೆ. ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ, ಜೆ.ಹೆಚ್. ಪಟೇಲ್‌ ಹಾಗೂ ರಾಮಕೃಷ್ಣ ಹೆಗಡೆ ಅವರ ಗರಡಿಯಲ್ಲಿ ಬೆಳೆದವನು ನಾನು ಎಂದು ತಮ್ಮ ರಾಜಕೀಯ ವಿರೋಧಿಗಳು ಹಾಗೂ ವಿಜಯೇಂದ್ರ ವಾರ್ನಿಂಗ್‌ಗೆ ಸೋಮಣ್ಣ ಟಾಂಗ್‌ ನೀಡಿದ್ದಾರೆ. ವಿಜಯೇಂದ್ರ ಏನು ಮಾಡಬೇಕು ಆ ಕೆಲಸವನ್ನು ಮಾಡಿಕೊಂಡು ಹೋಗಲಿ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಕೆಲವರು ಯಡಿಯೂರಪ್ಪ ಅವರ ನಾಯಕತ್ವವನ್ನು ಪ್ರಶ್ನೆ ಮಾಡುತ್ತಿದ್ದಾರೆ. ಅವರಿಗೆ ಒಂದು ಮಾತು ಹೇಳುತ್ತೇನೆ. ಯಾರು ಇವತ್ತು ಬಿಜೆಪಿ ನೋಡುತ್ತಿದ್ದಾರೋ ಅವರೆಲ್ಲರೂ ಕೇವಲ ಭವ್ಯ ಬಂಗಲೆಯನ್ನು ನೋಡುತ್ತಿದ್ದಾರೆ. ಆ ಭವನದ ಅಡಿಪಾಯ ಹಾಕಿದವರು ಯಡಿಯೂರಪ್ಪನವರು. ಈಗ ಅವರು ಸುಮ್ಮನಿರುವುದನ್ನು ಅವರ ವೀಕ್ನೆಸ್‌ ಎಂದುಕೊಂಡರೆ ಆಮೇಲೆ ನೀವು ಪಶ್ಚಾತ್ತಾಪ ಪಡ್ತೀರಿ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.

Add Asianetnews Kannada as a Preferred SourcegooglePreferred

Related Video