ಇದು ಕರ್ನಾಟಕ, ಗುಜರಾತ್ ಅಲ್ಲ, ಕಾಂಗ್ರೆಸ್‌ಗೆ 140ಕ್ಕಿಂತ ಹೆಚ್ಚು ಸೀಟು ಪಕ್ಕಾ: ಜಗದೀಶ್‌ ಶೆಟ್ಟರ್‌

ಇದು ಕರ್ನಾಟಕ, ಗುಜರಾತ್‌ ಅಲ್ಲ. ಹಾಗಾಗಿ ಇಲ್ಲಿ ನನ್ನನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಹುಬ್ಬಳ್ಳಿಯಲ್ಲಿ ಜಗದೀಶ್‌ ಶೆಟ್ಟರ್‌ ಹೇಳಿದ್ದಾರೆ. 

Share this Video
  • FB
  • Linkdin
  • Whatsapp

ಹುಬ್ಬಳ್ಳಿ: ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿರುವ ಜಗದೀಶ್‌ ಶೆಟ್ಟರ್‌ ಪ್ರಚಾರದ ಅಖಾಡಕ್ಕೆ ಇಳಿದಿದ್ದಾರೆ. ಕಾಂಗ್ರೆಸ್‌ ಇನ್ನೂ ದೊಡ್ಡ ಶಕ್ತಿಯಾಗಿ ಬೆಳೆಯಲು ಈ ಜಗದೀಶ್‌ ಶೆಟ್ಟರ್‌ ಶ್ರಮ ಹಾಕುತ್ತಾರೆ. ಈ ಚುನಾವಣೆಯಲ್ಲಿ ಕಾಂಗ್ರೆಸ್‌ 140 ರಿಂದ 150 ಸ್ಥಾನ ಗೆದ್ದು, ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ಜಗದೀಶ್‌ ಶೆಟ್ಟರ್‌ ವಿಶ್ವಾಸವನ್ನು ವ್ಯಕ್ತಪಡಿಸಿದರು. ಆದ್ರೆ ಬಿಜೆಪಿಯ ರಾಷ್ಟ್ರೀಯ ನಾಯಕರು ಜಗದೀಶ್‌ ಶೆಟ್ಟರ್‌ ಅವರನ್ನು ಸೋಲಿಸಿ ಎನ್ನುತ್ತಿದ್ದಾರೆ. ಕ್ಷೇತ್ರದ ಜನರಿಗೆ ನನ್ನ ಮೇಲೆ ಪ್ರೀತಿ, ವಿಶ್ವಾಸ ಇರುವ ತನಕ ಕಾಂಗ್ರೆಸ್‌ ಮತ್ತು ನನ್ನನ್ನು ಸೋಲಿಸಲು ಆಗುವುದಿಲ್ಲ. ಇದು ಕರ್ನಾಟಕ ಗುಜರಾತ್‌ ಅಲ್ಲ. ಹಾಗಾಗಿ ನನ್ನನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಶೆಟ್ಟರ್‌ ಹೇಳಿದ್ರು. 

ಇದನ್ನೂ ವೀಕ್ಷಿಸಿ: ಸಾಲದ ಅವ್ಯವಹಾರದ ಬಗ್ಗೆ ಸವದಿ ವಿರುದ್ಧ ತನಿಖೆಯಾಗಬೇಕು: ಶಾಗೆ ರಮೇಶ್‌ ಜಾರಕಿಹೊಳಿ ಮನವಿ

Related Video