ಸಾಲದ ಅವ್ಯವಹಾರದ ಬಗ್ಗೆ ಸವದಿ ವಿರುದ್ಧ ತನಿಖೆಯಾಗಬೇಕು: ಶಾಗೆ ರಮೇಶ್‌ ಜಾರಕಿಹೊಳಿ ಮನವಿ

ಅಥಣಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ರಮೇಶ್‌ ಜಾರಕಿಹೊಳಿ, ಲಕ್ಷ್ಮಣ ಸವದಿ ವಿರುದ್ಧ ತನಿಖೆಯಾಗಬೇಕು ಎಂದು ಅಮಿತ್‌ ಶಾ ಬಳಿ ಮನವಿ ಮಾಡಿಕೊಂಡರು.

Share this Video
  • FB
  • Linkdin
  • Whatsapp

ಬೆಳಗಾವಿ: ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತಿದ್ದಂತೆ ಪಕ್ಷಗಳಿಗೆ ಬಂಡಾಯದ ಬಿಸಿ ಜೋರಾಗಿ ತಟ್ಟಿತ್ತು. ಅದರಲ್ಲೂ ಜಗದೀಶ್‌ ಶೆಟ್ಟರ್‌ ಮತ್ತು ಲಕ್ಷ್ಮಣ ಸವದಿ ಬಿಜೆಪಿಗೆ ರಾಜೀನಾಮೆ ನೀಡಿ, ಕಾಂಗ್ರೆಸ್‌ ಸೇರಿರುವುದಂತೂ ಊಹಿಸಲಾಗದ ಸಂಗತಿಯಾಗಿತ್ತು. ಇನ್ನೂ ಅಥಣಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪಾಲ್ಗೊಂಡಿದ್ರು. ಈ ವೇಳೆ ಮಾತನಾಡಿದ ರಮೇಶ್‌ ಜಾರಕಿಹೊಳಿ, ಲಕ್ಷ್ಮಣ ಸವದಿ ವಿರುದ್ಧದ ಸಿಟ್ಟನ್ನು ಬಹಿರಂಗವಾಗಿ ಹೊರಹಾಕಿದರು. ಸವದಿ ವಿರುದ್ಧ ಕೃಷ್ಣ ಶುಗರ್ಸ್‌ನಲ್ಲಿ ನಡೆದ ಸಾಲದ ಅವ್ಯವಹಾರದ ಕುರಿತು ತನಿಖೆಯಾಗಬೇಕು ಎಂದು ವೇದಿಕೆ ಮೇಲೆಯೇ ಶಾಗೆ ರಮೇಶ್‌ ಜಾರಕಿಹೊಳಿ ಮನವಿ ಮಾಡಿಕೊಂಡರು.

ಇದನ್ನೂ ವೀಕ್ಷಿಸಿ: Day With Leader: ವರುಣಾದಲ್ಲಿ ಸಿದ್ದರಾಮಯ್ಯ ಜೊತೆ ಒಂದು ಸುತ್ತು!

Related Video