ಹೈಕಮಾಂಡ್‌ ಭೇಟಿಯಾದ್ರೂ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ಗೆ ಸಿಗದ ಟಿಕೆಟ್‌! ಮುಂದೇನು?

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್‌ ಜೋಷಿ ಅವರನ್ನು ಭೇಟಿಯಾಗಿದ್ದರು. ಇಲ್ಲೂ ಅವರಿಗೆ ಟಿಕೆಟ್‌ ನೀಡುವುದಿಲ್ಲ ಎಂದು ಪಕ್ಷ ತಿಳಿಸಿದೆ. ಈ ಹಿನ್ನೆಲೆ ಜಗದೀಶ್‌ ಶೆಟ್ಟರ್‌ ಅವರ ಮುಂದಿನ ನಡೆಯೇನು ಎಂಬುದು ಕುತೂಹಲಕ್ಕೆ ಕೆರಳಿಸಿದೆ. 

Share this Video
  • FB
  • Linkdin
  • Whatsapp

ಬಿಜೆಪಿ ಅಭ್ಯರ್ಥಿಗಳ ಎರಡು ಲಿಸ್ಟ್‌ ಬಿಡುಗಡೆಯಾದ ಬಳಿಕ ಭಿನ್ನಮತ ಭುಗಿಲೆದ್ದಿದೆ. ಇನ್ನೊಂದೆಡೆ, ಮಾಜಿ ಸಿಎಂ ಹಾಗೂ ಹುಬ್ಬಳ್ಳಿ ಸೆಂಟ್ರಲ್‌ ಕ್ಷೇತ್ರದ ಶಾಸಕ ಜಗದೀಶ್‌ ಶೆಟ್ಟರ್‌ ಅವರಿಗೆ ಸಹ ಟಿಕೆಟ್‌ ನಸಿಗುವುದಿಲ್ಲ ಎಂದು ಹೈಕಮಾಂಡ್‌ ಅವರಿಗೆ ಮಾಹಿತಿ ನೀಡಿದೆ. ಆದರೆ, ಸ್ಪರ್ಧೆ ಮಾಡುವ ಹಠ ಹಿಡಿದಿದ್ದ ಅವರು ನಿನ್ನೆ ದೆಹಲಿ ಭೇಟಿಗೂ ಹೋಗಿದ್ರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್‌ ಜೋಷಿ ಅವರನ್ನು ಭೇಟಿಯಾಗಿದ್ದರು. ಇಲ್ಲೂ ಅವರಿಗೆ ಟಿಕೆಟ್‌ ನೀಡುವುದಿಲ್ಲ ಎಂದು ಪಕ್ಷ ತಿಳಿಸಿದೆ. ಈ ಹಿನ್ನೆಲೆ ಜಗದೀಶ್‌ ಶೆಟ್ಟರ್‌ ಅವರ ಮುಂದಿನ ನಡೆಯೇನು ಎಂಬುದು ಕುತೂಹಲಕ್ಕೆ ಕೆರಳಿಸಿದೆ. 

Related Video