Asianet Suvarna News Asianet Suvarna News

ನಾಳೆ ಹುಬ್ಬಳ್ಳಿ-ಧಾರವಾಡ ಪಾಲಿಕೆ ಎಲೆಕ್ಷನ್‌: ಬಿಜೆಪಿಗೆ ಟಕ್ಕರ್‌ ಕೊಡಲು ಜಗದೀಶ್‌ ಶೆಟ್ಟರ್‌ ಪ್ಲ್ಯಾನ್‌

ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯನ್ನು ಗೆಲ್ಲಲು ಬಿಜೆಪಿ ಮತ್ತು ಕಾಂಗ್ರೆಸ್‌ ಎರಡೂ ರಣತಂತ್ರ ರೂಪಿಸುತ್ತಿವೆ.

ಹುಬ್ಬಳ್ಳಿ: ಈಗಾಗಲೇ ವಿಧಾನಸಭಾ ಚುನಾಣೆಯನ್ನು ಗೆದ್ದಿರುವ ಕಾಂಗ್ರೆಸ್‌, ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯನ್ನು ಗೆಲ್ಲಲು ರಣತಂತ್ರ ರೂಪಿಸುತ್ತಿದೆ. ಬಿಜೆಪಿಗೆ ಟಕ್ಕರ್‌ ಕೊಡಲು ಜಗದೀಶ್‌ ಶೆಟ್ಟರ್‌ ಪ್ಲ್ಯಾನ್‌ ಮಾಡುತ್ತಿದ್ದಾರೆ. ಮಾಜಿ ಸಿಎಂ ಜಗದೀಶ ಶೆಟ್ಟರ್‌ ಕಾಂಗ್ರೆಸ್‌ ಸೇರಿರುವುದರಿಂದ ಎಲ್ಲಿ ಸದಸ್ಯರನ್ನು ತಮ್ಮತ್ತ ಸೆಳೆಯುತ್ತಾರೋ ಎಂಬ ಭೀತಿಯಲ್ಲಿ ಬಿಜೆಪಿ ಸದಸ್ಯರೆಲ್ಲರೂ ರೆಸಾರ್ಚ್‌ಗೆ ತೆರಳಿದ್ದಾರೆ. ಇನ್ನೂ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌ ಸಭೆಯನ್ನು ನಡೆಸಿದ್ದು, ಗೇಮ್‌ ಪ್ಲ್ಯಾನ್‌ ಮಾಡಿದ್ದಾರೆ. 82 ಸದಸ್ಯರ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ 39 ಸದಸ್ಯಬಲ ಹೊಂದಿದ್ದರೆ, 33 ಸದಸ್ಯರನ್ನು ಕಾಂಗ್ರೆಸ್‌ ಹೊಂದಿದೆ. ಜೆಡಿಎಸ್‌ ಒಂದು, ಮೂವರು ಎಐಎಂಐಎಂ, ಆರು ಜನ ಪಕ್ಷೇತರರಿದ್ದಾರೆ. ನಾಲ್ವರು ಶಾಸಕರು, ಒಬ್ಬ ಸಂಸದರು, ಇಬ್ಬರು ವಿಧಾನಪರಿಷತ್‌ ಸದಸ್ಯರು ಮತದಾನಕ್ಕೆ ಅರ್ಹರಾಗಿದ್ದಾರೆ.

ಇದನ್ನೂ ವೀಕ್ಷಿಸಿ: ಸಿದ್ದರಾಮಯ್ಯ ಸರ್ಕಾರಕ್ಕೆ ಸಾಲು ಸಾಲು ಸವಾಲು: ಗ್ಯಾರಂಟಿ, ಬರಗಾಲಕ್ಕೆ ಹಣ ಸಂಗ್ರಹವೇ ದೊಡ್ಡ ಟಾಸ್ಕ್‌ ?

Video Top Stories