ಚುನಾವಣೆ ಸಮಯದಲ್ಲಿ ಭಿನ್ನಮತಕ್ಕೆ ಬ್ರೇಕ್‌: ಫೈರ್‌ ಬ್ರಾಂಡ್‌ 'ಯತ್ನಾಳ್' ತಣ್ಣಗಾಗಿದ್ದು ಹೇಗೆ ?

ಪಕ್ಷ ವಿರೋಧಿ ಹೇಳಿಕೆ ನೀಡದಂತೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್'ಗೆ ಅಮಿತ್ ಶಾ ವಾರ್ನಿಂಗ್ ಮಾಡಿದ್ದಾರೆ.
 

Share this Video
  • FB
  • Linkdin
  • Whatsapp

ಚುನಾವಣೆ ಸಮಯದಲ್ಲಿ ಬಿಜೆಪಿಯು ಭಿನ್ನಮತಕ್ಕೆ ಬ್ರೇಕ್‌ ಹಾಕಿದ್ದು, ಬಿಎಸ್‌ವೈ ವಿರುದ್ಧ ಮಾತನಾಡದಂತೆ ಯತ್ನಾಳ್'ಗೆ ಅಮಿತ್ ಶಾ ವಾರ್ನಿಂಗ್ ಮಾಡಿದ್ದಾರೆ. ಕಳೆದ ತಿಂಗಳು ಯತ್ನಾಳ್‌ ಅವರನ್ನು ಕರೆದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಮಾತನಾಡಿದ್ದರು. ಆದರೆ ಅವರ ಮಾತಿಗೆ ಬೆಲೆ ಕೊಡದೇ ಯತ್ನಾಳ್ ಮಾತು ಮುಂದುವರೆಸಿದ್ದರು. ಇದೀಗ ಅಮಿತ್‌ ಶಾ ಮಧ್ಯಪ್ರವೇಶದ ನಂತರ ಫೈರ್‌ ಬ್ರಾಂಡ್‌ ಯತ್ನಾಳ್‌ ತಣ್ಣಗಾಗಿದ್ದಾರೆ. ಕಳೆದ ತಿಂಗಳು ಯತ್ನಾಳ್ ಉಚ್ಛಾಟನೆ ಮಾಡಬೇಕೆಂದುರಾಜ್ಯ ಶಿಸ್ತು ಸಮಿತಿಯು, ಕೇಂದ್ರ ಶಿಸ್ತು ಸಮಿತಿಗೆ ಶಿಫಾರಸ್ಸು ಮಾಡಿತ್ತು.

Related Video