
ಮಾಧುಸ್ವಾಮಿ ಸತ್ಯ ಹೇಳಿದ್ಧಾರೆ, ವಾಸ್ತವದಲ್ಲಿ ಸರ್ಕಾರ ಇಲ್ಲ: ಸಿದ್ದರಾಮಯ್ಯ
J C Madhuswamy Controversy: ಮಾಧುಸ್ವಾಮಿಗೆ ಆಡಿಯೋ ವೈರಲ್ ಆಗುತ್ತೆ ಅಂತ ಗೊತ್ತಿರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ
ಬೆಂಗಳೂರು (ಆ. 16): ಮಾಧುಸ್ವಾಮಿ ಸತ್ಯ ಹೇಳಿದ್ಧಾರೆ, ವಾಸ್ತವದಲ್ಲಿ ಸರ್ಕಾರ ಇಲ್ಲ ಎಂದು ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಕಾನೂನು, ಸಂಸದೀಯ ವ್ಯವಹಾರ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಆಡಿಯೋ ವೈರಲ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು "ಮಾಧುಸ್ವಾಮಿಗೆ ಆಡಿಯೋ ವೈರಲ್ ಆಗುತ್ತೆ ಅಂತ ಗೊತ್ತಿರಲಿಲ್ಲ, ಮಾಧುಸ್ವಾಮಿ ಹೇಳಿದಂತೆ ರಾಜ್ಯದಲ್ಲಿ ಸರ್ಕಾರ ಇಲ್ಲ, ಮಾಧುಸ್ವಾಮಿ ಹೇಳಿದ್ದು ಸತ್ಯ" ಎಂದು ಹೇಳಿದ್ದಾರೆ.
Add Asianetnews Kannada as a Preferred Source

"ನಾವು ಸರ್ಕಾರ ನಡೆಸುತ್ತಿಲ್ಲ, ಮ್ಯಾನೇಜ್ ಮಾಡುತ್ತಿದ್ದೇವೆ" ಎಂಬ ಮಾಧುಸ್ವಾಮಿ ಹೇಳಿಕೆ ಈಗ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಸಚಿವ ಮಾಧುಸ್ವಾಮಿ ವಿರುದ್ಧ ಕೆಲ ಬಿಜೆಪಿ ನಾಯಕರೇ ತಿರುಗಿ ಬಿದ್ದಿದ್ದಾರೆ.
ಸರ್ಕಾರ ನಡಿಸ್ತಾ ಇಲ್ಲ, ಮ್ಯಾನೇಜ್ ಮಾಡ್ತಿದ್ದೀವಿ ಅಷ್ಟೇ: ಮಾಧುಸ್ವಾಮಿ ರಾಜೀನಾಮೆಗೆ ಮುನಿರತ್ನ ಆಗ್ರಹ