ಜೆಡಿಎಸ್‌ ನಿರ್ಧಾರದ ಮೇಲೆ ನಿಂತಿದೆಯಾ ಮೈತ್ರಿ ಭವಿಷ್ಯ..?: ಸಭೆ ಬಳಿಕ ಹೆಚ್‌ಡಿಡಿ ಹೇಳಿದ್ದೇನು ?

ನಮ್ಮ ಪಕ್ಷಕ್ಕಾಗಿರೋ ಅನ್ಯಾಯ ಅದೆಲ್ಲವನ್ನ ಜನರ ಮುಂದೆ ಇಟ್ಟು, ಕರ್ನಾಟಕದಲ್ಲಿ ಸಾಮಾರ್ಥ್ಯ ಇದೆ ಅನ್ನೋದನ್ನ ಸಾಬೀತು ಮಾಡ್ತೇವೆ ಎಂದು ಡಿಎಸ್‌ ವರಿಷ್ಠ ಹೆಚ್‌.ಡಿ. ದೇವೇಗೌಡ ಹೇಳಿದ್ದಾರೆ. 

Share this Video
  • FB
  • Linkdin
  • Whatsapp

ಬಿಜೆಪಿ- ಜೆಡಿಎಸ್‌ ಮೈತ್ರಿ ಆಗುತ್ತೋ ಇಲ್ವಾ ಎಂಬ ಪ್ರಶ್ನೆ ಈಗ ಕಾಡತೊಡಗಿದೆ. ಮೈತ್ರಿ ಭವಿಷ್ಯವೇನಿದ್ದರೂ ಜೆಡಿಎಸ್‌(JDS) ನಿರ್ಧಾರದ ಮೇಲೆ ನಿಂತಿದೆ ಎಂದು ಹೇಳಲಾಗುತ್ತಿದೆ. ಆದ್ರೆ ಜೆಡಿಎಸ್‌ ನಿಲುವು ಏನು ಎಂಬುದು ಇನ್ನೂ ನಿಗೂಢವಾಗಿದೆ. ನಿನ್ನೆ ಜೆಡಿಎಸ್‌ ಮುಖಂಡರು ಮತ್ತು ಶಾಸಕರ ಸಭೆ ವರಿಷ್ಠ ದೇವೇಗೌಡ(HD Devegowda) ಅವರ ನೇತೃತ್ವದಲ್ಲಿ ನಡೆದಿದೆ. ಈ ಸಭೆಯಲ್ಲಿ ಮೈತ್ರಿ ಸಂಬಂಧ ನಾಯಕರು, ಶಾಸಕರು ಚರ್ಚೆ ನಡೆಸಿದ್ದಾರೆ.ಇನ್ನೂ ಮತ್ತೊಂದೆಡೆ ಯಾವ ಎನ್‌ಡಿಎನೂ(NDA) ಇಲ್ಲ, ಯಪಿಎನೂ(UPA) ಇಲ್ಲ. ನಾವು ಸ್ವತಂತ್ರ್ಯವಾಗಿ ಹೋರಾಟ ಮಾಡುತ್ತೇವೆ ಎಂದು ಸಭೆ ಬಳಿಕ ಜೆಡಿಎಸ್‌ ವರಿಷ್ಠ ಹೆಚ್‌.ಡಿ. ದೇವೇಗೌಡ ಹೇಳಿದ್ದಾರೆ. ನನಗೆ ಇರುವ ಅನುಭವವನ್ನು ನಾಯಕರ ಜೊತೆ ಹಂಚಿಕೊಂಡಿದ್ದೇನೆ. ಈಗಲೂ ಸಲಹೆ ನೀಡಲು ಸಿದ್ಧನಿದ್ದೇನೆ ಎಂದು ಹೆಚ್‌ಡಿಡಿ ಹೇಳಿದರು. 

ಇದನ್ನೂ ವೀಕ್ಷಿಸಿ: ಬಗೆಬಗೆಯ ಕಥೆ ಹೇಳುತ್ತಿವೆ ಈ 4 ಫೋಟೋಗಳು: ಪಕ್ಷದಲ್ಲಿನ ಪ್ರಮುಖ ಬೆಳವಣಿಗೆಗೆ ಇದೇ ಕಾರಣವಾಗುತ್ತಾ..?

Related Video