ಬಗೆಬಗೆಯ ಕಥೆ ಹೇಳುತ್ತಿವೆ ಈ 4 ಫೋಟೋಗಳು: ಪಕ್ಷದಲ್ಲಿನ ಪ್ರಮುಖ ಬೆಳವಣಿಗೆಗೆ ಇದೇ ಕಾರಣವಾಗುತ್ತಾ..?

ಬಿ.ವೈ. ವಿಜಯೇಂದ್ರ ದಿಢೀರ್‌ ಆಗಿ ದೆಹಲಿಗೆ ತೆರಳಿ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಿ, ಮಾತುಕತೆ ನಡೆಸಿದ್ದಾರೆ. 
 

Share this Video
  • FB
  • Linkdin
  • Whatsapp

ಬಿಜೆಪಿಯ ಇತ್ತೀಚಿನ ಬೆಳವಣಿಗೆ ನೋಡಿದ್ರೆ, ಮುಂದಿನ ಭವಿಷ್ಯ ಏನಾಪ್ಪ ಎಂಬ ಪ್ರಶ್ನೆ ಕಾಡುತ್ತದೆ. ಆದ್ರೆ ಇದೀಗ ಹೊರಬಂದಿರುವ ನಾಲ್ಕು ಫೋಟೋಗಳು ಬಗೆ ಬಗೆಯ ಕಥೆಯನ್ನು ಹೇಳುತ್ತಿವೆ. ಪಕ್ಷದಲ್ಲಿ ಆಗುವ ಪ್ರಮುಖ ಬೆಳವಣಿಗೆಗೆ ಇದೇ ಕಾರಣವಾಗುತ್ತಾ ಎಂಬ ಪ್ರಶ್ನೆ ಸಹ ಮೂಡುತ್ತಿದೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ(BS Yediyurappa) ಅವರನ್ನು ಬಿಜೆಪಿ ನಾಯಕ ಸಿ.ಟಿ. ರವಿ(CT Ravi) ಭೇಟಿ ಮಾಡಿದ್ದಾರೆ. ಚುನಾವಣೆ ಬಳಿಕ ಮೊದಲ ಬಾರಿಗೆ ಬಿಎಸ್‌ವೈ ಜೊತೆ ಚರ್ಚೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಬಿಎಸ್‌ವೈ ಕಾಲಿಗೆ ಬಿದ್ದು ಆಶೀರ್ವಾದವನ್ನು ಪಡೆದಿದ್ದಾರೆ. ಚುನಾವಣೆಗೂ ಮುನ್ನ ಸಿಟಿ ರವಿ ಬಿಎಸ್‌ವೈ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಇದು ಒಂದು ಫೋಟೋ ಆದ್ರೆ, ಎರಡನೇಯದು ಆಸ್ಪತ್ರೆಯಲ್ಲಿ ಬಸನಗೌಡ ಯತ್ನಾಳ್‌ರನ್ನು(Basanagowda patil Yatnal) ಬಿಎಸ್‌ವೈ ಭೇಟಿಯಾಗಿದ್ದಾರೆ. ಇದರ ನಡುವೆ ಅತ್ತ ಬಿ.ವೈ.ವಿಜಯೇಂದ್ರ(BY Vijayendra) ದಿಢೀರ್‌ ಆಗಿ ದೆಹಲಿಗೆ ತೆರಳಿದ್ದಾರೆ. ಅಮಿತ್‌ ಶಾ(Amith Shah) ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಇನ್ನೂ ಪ್ರಧಾನಿ ಮೋದಿ ಅವರನ್ನು ತೇಜಸ್ವಿನಿ ಅನಂತ್‌ಕುಮಾರ್‌ ಭೇಟಿಯಾಗಿದ್ದಾರೆ.

ಇದನ್ನೂ ವೀಕ್ಷಿಸಿ: ಮುಂಗಾರು ಮಳೆ ಅವಾಂತರ: ಕೊಚ್ಚಿ ಹೋಗುತ್ತಿದ್ದ ಬೈಕ್‌ ಸವಾರನ ರಕ್ಷಿಸಿದ ಗ್ರಾಮಸ್ಥರು

Related Video