ಹಳೇ ಮೈಸೂರು ಭಾಗದ ಮೇಲೆ 3 ಪಕ್ಷಗಳ ಕಣ್ಣು: ಮೋದಿಗಿಂತ ಮೊದಲೇ ಅಖಾಡಕ್ಕಿಳಿಯಲಿರುವ ದೇವೇಗೌಡರು

ಹಳೇ ಮೈಸೂರು ಭಾಗದಲ್ಲಿ ದೇವೇಗೌಡರಿಂದ ಸಮಾವೇಶ
ಮೋದಿಗಿಂತ ಮೊದಲೇ ಅಖಾಡಕ್ಕಿಳಿಯಲಿರುವ ಹೆಚ್‌ಡಿಡಿ
ಬೃಹತ್‌ ಸಮಾವೇಶದ ಮೂಲಕ ಸೆಡ್ಡು ಹೊಡೆಯಲು ಪ್ಲ್ಯಾನ್‌

Share this Video
  • FB
  • Linkdin
  • Whatsapp

ಮೈಸೂರು: ಹಳೇ ಮೈಸೂರು ಭಾಗದ ಮೇಲೆ ಮೂರು ಪಕ್ಷಗಳು ಕಣ್ಣಿಟ್ಟಿದ್ದು, ಪ್ರಧಾನಿ ಮೋದಿ ಆಗಮನಕ್ಕೂ ಮೊದಲೇ ಮಾಜಿ ಪ್ರಧಾನಿ ದೇವೇಗೌಡರು ಚುನಾವಣಾ ಪ್ರಚಾರದ ಅಖಾಡಕ್ಕೆ ಇಳಿಯಲಿದ್ದಾರೆ. ನಾಳೆಯೇ ಮಾಗಡಿಯಲ್ಲಿ ದೇವೇಗೌಡರು ಸಮಾವೇಶ ನಡೆಸಲಿದ್ದಾರೆ. ಚನ್ನಪಟ್ಟಣ ಹೈವೋಲ್ಟೇಜ್‌ ಕ್ಷೇತ್ರಗಳಲ್ಲಿ ಒಂದಾಗಿದ್ದು, ಇಲ್ಲಿ ಜೆಡಿಎಸ್‌ನಿಂದ ಹೆಚ್‌.ಡಿ. ಕುಮಾರಸ್ವಾಮಿ, ಬಿಜೆಪಿಯಿಂದ ಸಿ.ಪಿ.ಯೋಗೇಶ್ವರ್, ಕಾಂಗ್ರೆಸ್‌ನಿಂದ ಪ್ರಸನ್ನ ಗೌಡ ಅಭ್ಯರ್ಥಿಯಾಗಿದ್ದಾರೆ. ಏ.30 ರಂದು ಪ್ರಧಾನಿ ಮೋದಿ ಹಳೇ ಮೈಸೂರು ಭಾಗದಲ್ಲಿ ಪ್ರಚಾರ ನಡೆಸಲಿದ್ದಾರೆ. ಜೆಡಿಎಸ್‌ ಮತಗಳು ಕೈತಪ್ಪದಂತೆ ದೇವೇಗೌಡರು ಪ್ಲ್ಯಾನ್‌ ಮಾಡಿದ್ದು, ರಾಮನಗರ, ಚನ್ನಪಟ್ಟಣದಲ್ಲಿ ಹೆಚ್‌ಡಿಡಿ ಸಮಾವೇಶ ನಡೆಸಲಿದ್ದಾರೆ. 

ಇದನ್ನೂ ವೀಕ್ಷಿಸಿ: ಕೇಸರಿ ಕಲಿಗಳ ಪರ ರಾಜ್ಯದಲ್ಲಿ ಧೂಳೆಬ್ಬಿಸಲಿದೆ 'ನಮೋ' ಸುನಾಮಿ: 8 ಜಿಲ್ಲೆಗಳಲ್ಲಿ ಮೋದಿ ಮೆಗಾ ಕ್ಯಾಂಪೇನ್‌

Related Video