14 ವರ್ಷದೊಳಗಿನ ಮಕ್ಕಳಿಗಾಗಿ ಹನುಮನ ವೇಷಧಾರಣೆ ಸ್ಪರ್ಧೆ: ಚಕ್ರವರ್ತಿ ಸೂಲಿಬೆಲೆ

ಯುವ ಬ್ರಿಗೇಡ್‌ ಸಂವಾದ ಎಂಬ ಯ್ಯೂಟೂಬ್‌ ಚಾನಲ್‌ನ ಸಹಯೋಗದೊಂದಿಗೆ ಹನುಮನ ವೇಷಧಾರಣೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

First Published May 7, 2023, 12:35 PM IST | Last Updated May 7, 2023, 12:36 PM IST

ಬೇಸಿಗೆ ರಜೆಯಲ್ಲಿ ಮಕ್ಕಳು ಹೇಗೆಗೋ ಸಮಯವನ್ನು ಕಳೆಯುತ್ತಿರುತ್ತಾರೆ. ಹೀಗಾಗಿ ಯುವ ಬ್ರಿಗೇಡ್‌ ಸಂವಾದ ಎಂಬ ಯ್ಯೂಟೂಬ್‌ ಚಾನಲ್‌ನ ಸಹಯೋಗದೊಂದಿಗೆ ಹನುಮಂತನ ವೇಷಧಾರಣೆ ಸ್ಪರ್ಧೆಯನ್ನು ಮಾಡುತ್ತಿದ್ದೇವೆ. ಹದಿನಾಲ್ಕು ವರ್ಷದೊಳಗಿನ ಮಕ್ಕಳಿಗೆ ಮನೆಯಲ್ಲೇ ತಾಯಂದಿರು ಹನುಮನ ವೇಷವನ್ನು ಹಾಕಿ ಒಂದು ಫೋಟೋ ಕಳುಹಿಸಬೇಕು. ಒಂದು ವೇಳೆ ವಿಡಿಯೋ ಕಳುಹಿಸುವುದಾದ್ರೆ, ಚಿಕ್ಕದ್ದನ್ನು ಕಳುಹಿಸಿ ಕೊಡಿ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಮಾಹಿತಿ ನೀಡಿದ್ದಾರೆ. ಆದ್ರೆ ಈ ವಿಡಿಯೋವನ್ನು ಫೋಟೋ ಎಂದೇ ಪರಿಗಣಿಸಲಾಗುತ್ತದೆಯಂತೆ. ಒಳ್ಳೆಯ ಫೋಟೋಗೆ ಮೊದಲನೇ ಬಹುಮಾನವಾಗಿ 10 ಸಾವಿರ ರೂಪಾಯಿ ಮತ್ತು ರಾಮಾಯಣ ಪುಸ್ತಕ ಕೊಡಲಾಗುತ್ತದೆ. ಎರಡನೇ ಬಹುಮಾನ 5 ಸಾವಿರ, ರಾಮಾಯಣ ಪುಸ್ತಕ,  ಮೂರನೇ ಬಹುಮಾನವಾಗಿ 3 ಸಾವಿರ ರಾಮಾಯಣ ಪುಸ್ತಕ ಕೊಡಲು ನಿಶ್ಚಯಿಸಲಾಗಿದೆ. ಆಂಜನೇಯನ ಮೌಲ್ಯಗಳನ್ನು ಮಕ್ಕಳಿಗೆ ತುಂಬುವ ಸಲುವಾಗಿ ಈ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಸೂಲಿಬೆಲೆ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ: ಇದು ಕರ್ನಾಟಕ, ಗುಜರಾತ್ ಅಲ್ಲ, ಕಾಂಗ್ರೆಸ್‌ಗೆ 140ಕ್ಕಿಂತ ಹೆಚ್ಚು ಸೀಟು ಪಕ್ಕಾ: ಜಗದೀಶ್‌ ಶೆಟ್ಟರ್‌

Video Top Stories