ಮತ್ತೊಂದು ಧರ್ಮ ಸಮರಕ್ಕೆ ಸಜ್ಜಾಯ್ತಾ ಕರಾವಳಿ..?: ಆ್ಯಕ್ಷಿವ್‌ ಆಯ್ತು ಆ್ಯಂಟಿ ಕಮ್ಯೂನಲ್‌ ವಿಂಗ್‌..!

ನೈತಿಕ ಪೊಲೀಸ್‌ ಗಿರಿಯಲ್ಲಿ ಭಾಗಿಯಾದ ಮೂವರು ಭಜರಂಗದಳ ಕಾರ್ಯಕರ್ತರನ್ನು ಗಡಿಪಾರು ಮಾಡಲು ಆದೇಶ ಹೊರಡಿಸಲಾಗಿದೆ.
 

Share this Video
  • FB
  • Linkdin
  • Whatsapp

ಮತ್ತೊಂದು ಧರ್ಮ ಸಮರಕ್ಕೆ ಕರಾವಳಿ ಸಜ್ಜಾಯ್ತಾ ಎಂಬ ಪ್ರಶ್ನೆ ಇದೀಗ ಮೂಡಲಾರಂಭಿಸಿದೆ. ಮಂಗಳೂರಿನಲ್ಲಿ ಆ್ಯಂಟಿ ಕಮ್ಯೂನಲ್‌ ವಿಂಗ್‌ ಆ್ಯಕ್ಷಿವ್‌ ಆಗಿದೆ. ಹಿಂದೂ ಕಾರ್ಯಕರ್ತರ ವಿರುದ್ಧ ಮೊದಲ ಅಸ್ತ್ರವನ್ನು ಪ್ರಯೋಗ ಮಾಡಲಾಗುತ್ತಿದೆ. ಮೂವರು ಭಜರಂಗದಳ ಕಾರ್ಯಕರ್ತರಿಗೆ(bajrang dal) ಗಡಿಪಾರು ನೋಟಿಸ್‌ನನ್ನು ನೀಡಲಾಗಿದೆ. ಇವರು ನೈತಿಕ ಪೊಲೀಸ್‌ ಗಿರಿಯಲ್ಲಿ(Moral Police) ಭಾಗಿಯಾಗಿದ್ದರು ಎಂಬ ಆರೋಪ ಕೇಳಿಬಂದಿದೆ. ಇಂದು ಕಾನೂನು ಸುವ್ಯವಸ್ಥೆ ಡಿಸಿಪಿ ಎದುರು ಹಾಜರಾಗಲು ಸೂಚಿಸಲಾಗಿದೆ. ದಕ್ಷಿಣ ಕನ್ನಡದ(Dakshina Kannada)ಮೂವರು ಹಿಂದೂ ಕಾರ್ಯಕರ್ತರನ್ನು ಗಡಿಪಾಟು ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇತ್ತೀಚೆಗೆ ನಡೆದ ಎರಡು ನೈತಿಕ ಪೊಲೀಸ್‌ ಗಿರಿಯಲ್ಲಿ ಇವರು ಭಾಗಿಯಾಗಿದ್ದರು. ಸುಲ್ತಾನ್‌ ಜ್ಯುವೆಲ್ಲರಿ ಹಾಗೂ ಮರೋಳಿ ಹೋಳಿ ಆಚರಣೆ ವೇಳೆ ಗಲಾಟೆ ಮಾಡಿದ್ದರು. ಸ್ಥಳೀಯ ಠಾಣೆ ಪೊಲೀಸರು ಗಡಿಪಾರಿಗೆ ವರದಿ ಸಲ್ಲಿಸಿದ್ದರು.

ಇದನ್ನೂ ವೀಕ್ಷಿಸಿ: ಹೆತ್ತ ತಂದೆ- ತಾಯಿಗೆ ಚಟ್ಟ ಕಟ್ಟಿದ ಸೈಕೋ ಮಗ: ಅಪ್ಪ-ಅಮ್ಮ, ಮಕ್ಕಳು..ಇಲ್ಲಿ ಸಂಬಂಧಗಳಿಗಿಲ್ವಾ ಬೆಲೆ..?

Related Video