ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕನ ಪಟ್ಟ ಯಾರಿಗೆ? ಜಿ.ಟಿ.ದೇವೆಗೌಡರಿಗೆ ಪಟ್ಟ ಕಟ್ಟಲು ತೀರ್ಮಾನ?

ಜೆಡಿಎಸ್ ಪಡಸಾಲೆಯಲ್ಲಿ ನೂತನ ನಾಯಕನ ಆಯ್ಕೆ ಬಗ್ಗೆ ಚರ್ಚೆ ಜೋರಾಗಿದ್ದು, ಹಿರಿಯ ನಾಯಕ ಜಿ.ಟಿ.ದೇವೆಗೌಡರಿಗೆ ಪಟ್ಟ ಕಟ್ಟಲು ತೀರ್ಮಾನಿಸಿದ್ದಾರೆ ಎನ್ನಲಾಗ್ತಿದೆ. 

First Published Jun 19, 2024, 10:08 AM IST | Last Updated Jun 19, 2024, 10:09 AM IST

ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ(H.D. Kumaraswamy)ಕೇಂದ್ರ ಸಚಿವರಾದ ಬೆನ್ನಲ್ಲೇ ಜೆಡಿಎಸ್‌ನಲ್ಲಿ(JDS) ಉತ್ಸಾಹ ಜೋರಾಗಿದೆ. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕನ ಪಟ್ಟ ಯಾರಿಗೆ ಎಂಬ ಪ್ರಶ್ನೆ ಇದೀಗ ಉದ್ಭವವಾಗಿದೆ. ಜೆಡಿಎಸ್ ಪಡಸಾಲೆಯಲ್ಲಿ ನೂತನ ನಾಯಕನ ಆಯ್ಕೆ ಬಗ್ಗೆ ಚರ್ಚೆ ಜೋರಾಗಿದೆ. ಪಕ್ಷದ ಹಿರಿಯ ನಾಯಕನಿಗೆ ಪಟ್ಟ ಕಟ್ಟಲು ದಳಪತಿಗಳ ನಿರ್ಧಾರ ಮಾಡಿದಂತೆ ಕಾಣುತ್ತಿದೆ. ಹಿರಿಯ ನಾಯಕ ಜಿ.ಟಿ.ದೇವೆಗೌಡರಿಗೆ(GT Devegowda) ಪಟ್ಟ ಕಟ್ಟಲು ತೀರ್ಮಾನಿಸಿದ್ದಾರೆ ಎನ್ನಲಾಗ್ತಿದೆ. 18 ಸ್ಥಾನಗಳನ್ನು ಹೊಂದಿರುವ ಜೆಡಿಎಸ್ ಸಾರಥ್ಯ ಜಿಟಿಡಿ ಹೆಗಲಿಗೆ ವಹಿಸುವ ಸಾಧ್ಯತೆ ಇದೆ. ಜಿಟಿಡಿ ಹೊರತುಪಡಿಸಿದ್ರೆ ಪಕ್ಷದಲ್ಲಿ ರೇವಣ್ಣ ಹಿರಿಯ ನಾಯಕ. ಪ್ರಜ್ವಲ್ ಕೇಸ್‌ನಿಂದಾಗಿ ರೇವಣ್ಣಗೆ ಸ್ಥಾನ ಸೂಕ್ತವಲ್ಲವೆಂಬ ಮಾತು ಕೇಳಿಬರುತ್ತಿದೆ. ಸಿದ್ದರಾಮಯ್ಯ ವಿರುದ್ಧ ಹೋರಾಟಕ್ಕೆ ಜಿಟಿಡಿ ಸೂಕ್ತವೆಂಬ ವಾದ ಕೇಳಿಬರುತ್ತಿದೆ. ಕೇಂದ್ರ ಸಚಿವ ಕುಮಾರಸ್ವಾಮಿ ನೇತೃತ್ವದಲ್ಲಿ ಶೀಘ್ರವೇ ಜೆಡಿಎಸ್ ಶಾಸಕರು, ಪರಿಷತ್ ಸದಸ್ಯರ ಸಭೆ ಕರೆಯಲಾಗುವುದು. ಸಭೆಯಲ್ಲಿ ಜಿಟಿಡಿಯನ್ನ ಅಧಿಕೃತವಾಗಿ ಆಯ್ಕೆ ಮಾಡುವ ಸಾಧ್ಯತೆ ಇದೆ.

ಇದನ್ನೂ ವೀಕ್ಷಿಸಿ:  ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗೆ ಭಾರೀ ಡಿಮ್ಯಾಂಡ್: ನಾಗೇಂದ್ರ ರಾಜೀನಾಮೆಯಿಂದ ತೆರವಾದ ಸ್ಥಾನದ ಮೇಲೆ ಕಣ್ಣು!