Asianet Suvarna News Asianet Suvarna News

ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗೆ ಭಾರೀ ಡಿಮ್ಯಾಂಡ್: ನಾಗೇಂದ್ರ ರಾಜೀನಾಮೆಯಿಂದ ತೆರವಾದ ಸ್ಥಾನದ ಮೇಲೆ ಕಣ್ಣು!

ಪರಿಶಿಷ್ಟ ಇಲಾಖೆ ನಮಗೆ ಕೊಡಿ ಎಂದು ಮಹದೇವಪ್ಪ ಮನವಿ
ಸಮಾಜ ಕಲ್ಯಾಣ ಇಲಾಖೆ ಸಚಿವರಿಂದ ಸಿದ್ದರಾಮಯ್ಯಗೆ ಮನವಿ
ನಾವು ನಿರ್ವಹಣೆ ಮಾಡ್ತೀವಿ ನಮಗೆ ಕೊಡಿ ಎಂದು ಸಿಎಂಗೆ ಲೇಟರ್

First Published Jun 19, 2024, 9:48 AM IST | Last Updated Jun 19, 2024, 9:49 AM IST

ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗೆ(Scheduled Tribes Welfare Department) ಭಾರೀ ಡಿಮ್ಯಾಂಡ್‌ ಶುರುವಾಗಿದ್ದು, ಹಲವರು ಶಾಸಕರು ನಾಗೇಂದ್ರ(B Nagendra) ರಾಜೀನಾಮೆಯಿಂದ ತೆರವಾದ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಅಲ್ಲದೇ ಪರಿಶಿಷ್ಟ ಇಲಾಖೆ ನಮಗೆ ಕೊಡಿ ಎಂದು ಸಚಿವ ಮಹದೇವಪ್ಪ(HC Mahadevappa) ಮನವಿ ಮಾಡಿದ್ದಾರೆ. ಸಮಾಜ ಕಲ್ಯಾಣ ಇಲಾಖೆ(Social Welfare Department) ಸಚಿವರಿಂದ ಸಿದ್ದರಾಮಯ್ಯಗೆ ಮನವಿ ಮಾಡಲಾಗಿದೆ. ನಾವು ನಿರ್ವಹಣೆ ಮಾಡ್ತೀವಿ ನಮಗೆ ಕೊಡಿ ಎಂದು ಸಿಎಂಗೆ ಲೇಟರ್ ಬರೆಯಲಾಗಿದೆ. ವಾಲ್ಮೀಕಿ ನಿಗಮದಲ್ಲಿ 187 ಕೋಟಿ ಅಕ್ರಮ ಹಣ ವರ್ಗಾವಣೆ ಆಗಿತ್ತು. ಹಣ ವರ್ಗಾವಣೆ ದಂಧೆ(Money transfer scam) ಹಿನ್ನೆಲೆ ನಾಗೇಂದ್ರ ರಾಜೀನಾಮೆ ನೀಡಿದ್ದರು. ಸಿದ್ದರಾಮಯ್ಯ ಸುಪರ್ದಿಯಲ್ಲಿ ಇರುವ ಪರಿಶಿಷ್ಠ ಪಂಗಡ ಇಲಾಖೆ. ಈ ಹಿಂದೆ ಸಮಾಜ ಕಲ್ಯಾಣ ಇಲಾಖೆ ಜೊತೆಗೆ ಇದೇ ಇಲಾಖೆ ಇತ್ತು. ಬಿಜೆಪಿ ಸರ್ಕಾರ ಎರಡನ್ನೂ ಪ್ರತ್ಯೇಕಗೊಳಿಸಿ ಇಲಾಖೆ ಮಾಡ್ತು. ಇದ್ರಿಂದ SCSP-TSP ಅನುದಾನ ಹಂಚಿಕೆ ಸಾಕಷ್ಟು ಗೊಂದಲ ಆಗ್ತಿದೆ. ಈ ಎಲ್ಲ ಅಂಶಗಳ ಉಲ್ಲೇಖಿಸಿ ಸಚಿವ ಮಹದೇವಪ್ಪ ಸಿಎಂಗೆ ಮನವಿ ಮಾಡಿದ್ದಾರೆ. ಇದೇ ಖಾತೆ ಮೇಲೆ ಸಚಿವ ಶಿವರಾಜ್ ತಂಗಡಗಿ ಕಣ್ಣಿಟ್ಟಿದ್ದು, ಇಬ್ಬರಲ್ಲಿ ಯಾರಿಗೆ ಪರಿಶಿಷ್ಟ ಪಂಗಡ ನಿಗಮ ಸಿಗುತ್ತೆ ಎಂಬುದೇ ಸಸ್ಪೆನ್ಸ್ ಆಗಿದೆ.

ಇದನ್ನೂ ವೀಕ್ಷಿಸಿ:  ಭರ್ಜರಿ ಪ್ರದರ್ಶನ ಕಾಣುತ್ತಿರುವ ಲವ್‌ ಲಿ ಸಿನಿಮಾ: ಎಲ್ಲೆಲ್ಲೂ ಥಿಯೇಟರ್‌ಗಳು ಹೌಸ್ ಫುಲ್‌ !

Video Top Stories