ಸಿದ್ದರಾಮಯ್ಯ ತಾಕೀತು ಬೆನ್ನಲ್ಲೇ ಅಖಾಡಕ್ಕಿಳಿದ ಸಚಿವರು: ಕೊಪ್ಪಳ ಕಾಂಗ್ರೆಸ್‌ನಲ್ಲಿ ಗರಿಗೆದರಿದ ಲೋಕಸಮರ ಸರ್ಕಸ್
ಲೋಕಸಭೆ ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಬಾಕಿ ಉಳಿದಿದ್ದು, ಕೊಪ್ಪಳದಲ್ಲಿ ಲೋಕಸಭಾ ಚುನಾವಣೆ ಕೆಲಸಗಳು ಗರಿಗೆದರಿವೆ. ಕೊಪ್ಪಳ ಲೋಕಸಭೆಗೆ ಕಾಂಗ್ರೆಸ್ ಪಕ್ಷದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಕಾಂಕ್ಷಿಗಳಿದ್ದು, ಹೈಕಮಾಂಡ್ ಅಳೆದು ತೂಗಿ ಅಭ್ಯರ್ಥಿಯನ್ನು ಘೋಷಣೆ ಮಾಡಲಿದೆ. ಇದಕ್ಕಾಗಿ ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿಪ್ರಾಯ ಸಂಗ್ರಹ ಮಾಡಲಾಯ್ತು.
ಮೊನ್ನೆಯಷ್ಟೇ ಸಿಎಂ ಸಿದ್ದರಾಮಯ್ಯ ಸಚಿವರಿಗೆ ಡಿನ್ನರ್ ಪಾರ್ಟಿ ಆಯೋಜಿಸಿದ್ದರು. ಈ ವೇಳೆ ಲೋಕಸಭೆ ಚುನಾವಣೆಗೆ (Loksabha election)ಸಜ್ಜಾಗಿ, ಆದಷ್ಟು ಬೇಗ ನಿಮ್ಮ ನಿಮ್ಮ ಜಿಲ್ಲೆಯಲ್ಲಿನ ಲೋಕಸಭೆ ಅಭ್ಯರ್ಥಿಗಳ ಸಂಭಾವ್ಯ ಪಟ್ಟ ನೀಡಿ ಎಂದು ಸಚಿವರಿಗೆ ತಾಕೀತು ಮಾಡಿದ್ದರು. ಇದರ ಬೆನ್ನಲ್ಲೇ ಕೊಪ್ಪಳ(Koppal) ಕಾಂಗ್ರೆಸ್‌ನಲ್ಲಿ (COngress) ಚಟುವಟಿಕೆ ಬಿರುಸುಗೊಂಡಿದೆ. ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯ, ಮುಂಚೂಣಿ ಕಾರ್ಯಕರ್ತರು ಮತ್ತು ಬೆಂಬಲಿಗರ ಪೂರ್ವಭಾವಿ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಾಯ್ತು. ಸಚಿವ ಆರ್.ಬಿ. ತಿಮ್ಮಾಪುರ ವೀಕ್ಷಕರಾಗಿ ಭಾಗಿಯಾಗಿದ್ದರು. ಕೊಪ್ಪಳ ಲೋಕಸಭೆಗೆ ಕಾಂಗ್ರೆಸ್‌ನಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ದೊಟ್ಟ ಮಟ್ಟದಲ್ಲೇ ಇದೆ. ಕೆ. ರಾಜಶೇಖರ ಹಿಟ್ನಾಳ್, ಅಮರೇಗೌಡ ಬಯ್ಯಾಪುರ, ಬಸನಗೌಡ ಬಾದರ್ಲಿ ಸೇರಿದಂತೆ ಹಲವರು ರೇಸ್ನಲ್ಲಿದ್ದಾರೆ. ಅಭಿಪ್ರಾಯ ಸಂಗ್ರಹ ಪೂರ್ವಭಾವಿ ಸಭೆಯಲ್ಲಿ ಇಕ್ಬಾಲ್ ಅನ್ಸಾರಿ ಬಿಟ್ಟು ಬಹುತೇಕ ಆಕಾಂಕ್ಷಿಗಳು ಹಾಜರಿದ್ದರು. ತಮ್ಮ ಬೆಂಬಲಿಗರ ಮೂಲಕ ಶಕ್ತಿ ಪ್ರದರ್ಶನ ಮಾಡಿದ್ರು. ಒಂದೊಂದೇ ತಾಲೂಕಿನ ಕಾರ್ಯಕರ್ತರನ್ನು ಕೊಠಡಿಯೊಳಗೆ ಕರೆದು ಸಚಿವ ಆರ್.ಬಿ. ತಿಮ್ಮಾಪುರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 8 ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಕಾರ್ಯಕರ್ತರ ಅಭಿಪ್ರಾಯದ ಗೌಪ್ಯತೆ ಕಾಯ್ದುಕೊಳ್ಳಲು ಒಂದೊಂದೇ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರು, ಬೆಂಬಲಿಗರನ್ನು ಕರೆದು ಅಭಿಪ್ರಾಯ ಸಂಗ್ರಹಿಸಲಾಯಿತು. ಈ ವೇಳೆ ಕೊಠಡಿಯ ಮುಂದೆ ಹಾಗೂ ವೇದಿಕೆಯಲ್ಲಿದ್ದ ಜನರನ್ನು ಹೊರಗೆ ಕಳಿಸಲು ಸ್ವತಃ ಸಚಿವ ಶಿವರಾಜ ತಂಗಡಗಿಯೇ ಹರಸಾಹಸ ಪಡಬೇಕಾಯಿತು. ಎಷ್ಟು ಹೇಳಿದರೂ ಕಾರ್ಯಕರ್ತರು ಹೊರಗೆ ಹೋಗದೆ ಇದ್ದಾಗ ಗರಂ ಆಗಿ ತಾವೇ ಕಾರ್ಯಕರ್ತರನ್ನು ಹೊರಗೆ ಕಳಿಸಿದರು.
ಇದನ್ನೂ ವೀಕ್ಷಿಸಿ: ಮೊಬೈಲ್..ಲ್ಯಾಪ್‌ಟಾಪ್‌ಗಳೇ ಈ ಅಪರಾಧಿಗಳ ಅಸ್ತ್ರ..! ಡೀಪ್ ಫೇಕ್ ಗರ್ಭದಿಂದ ಹೊರಬಂದಿವೆ ಲಕ್ಷಾಂತರ ವಿಡಿಯೋ..!