ಮೊಬೈಲ್..ಲ್ಯಾಪ್‌ಟಾಪ್‌ಗಳೇ ಈ ಅಪರಾಧಿಗಳ ಅಸ್ತ್ರ..! ಡೀಪ್ ಫೇಕ್ ಗರ್ಭದಿಂದ ಹೊರಬಂದಿವೆ ಲಕ್ಷಾಂತರ ವಿಡಿಯೋ..!

ಅಂತರ್ಜಾಲದಲ್ಲಿ 1.43 ಲಕ್ಷ ಡೀಪ್ ಫೇಕ್ ವಿಡಿಯೋ..! 
ಇಂಟರ್‌ನೆಟ್‌ನಲ್ಲಿ ಸಿಗುತ್ತೆ ವೆರೈಟಿ-ವೆರೈಟಿ ಆ್ಯಪ್‌ಗಳು..!
ಕಾನೂನಿನಲ್ಲಿ ಡೀಪ್ ಫೇಕ್ ಕ್ರಿಮಿನಲ್ಸ್‌ಗೆ ಏನು ಶಿಕ್ಷೆ ..?

Share this Video
  • FB
  • Linkdin
  • Whatsapp

ಇದು ಸೋಶಿಯಲ್‌ ಮೀಡಿಯಾ ಝಮಾನಾ..ಜನ ಫೇಮಸ್ ಆಗ್ಬೇಕು ಅಂತ ಮಾಡಬಾರದ ಸರ್ಕಸ್ ಮಾಡ್ತಿರ್ತಾರೆ. ಕೈಯಲ್ಲಿ ಮೊಬೈಲ್(Mobile) ಹಿಡ್ಕೊಂಡು ಸೋಶಿಯಲ್ ಮೀಡಿಯಾ ಓಪನ್ ಮಾಡ್ಕೊಂಡ್ಬಿಟ್ರೆ ಮುಗಿತು. ಅದರಲ್ಲೇ ಮುಳುಗಿ ಹೋಗಿ ಬಿಡ್ತಾರೆ. ಜನರ ಇದೇ ವೀಕ್ನೆಸ್ ಮುಂದಿಟ್ಟುಕೊಂಡು ಕೆಲ ಕ್ರಿಮಿನಲ್ಸ್, ಸೈಲೆಂಟಾಗೆ ತೇಜೋ ವಧೆಗೆ ಸ್ಕೆಚ್ ಹಾಕ್ತಿದ್ದಾರೆ. ಆ ಲೀಸ್ಟ್‌ನಲ್ಲಿ ನಾವು ಇರಬಹುದು. ನೀವು ಇರಬಹುದು. ಇತ್ತಿಚೆಗೆ ವೈರಲ್ ಆಗಿರುವ ವಿಡಿಯೋ (Video)ನೋಡಿ, ಎಲ್ಲರಿಗಿಂತ ಹೆಚ್ಚು ದಂಗಾಗಿದ್ದು ಖುದ್ದು ನಟಿ ರಶ್ಮಿಕಾ ಮಂದಣ್ಣ(Rashmika Mandanna). ಎಸ್ ರಶ್ಮಿಕಾ ತನ್ನ ವಿಡಿಯೋ ತಾನು ನೋಡಿಯೇ ಶಾಕ್ ಆಗಿದ್ದರು. ಏಕೆಂದರೆ ಆ ವಿಡಿಯೋದಲ್ಲಿ ಅವರು ಇದ್ದಿದ್ದು ನಿಜ. ಆದರೂ ಅವರಾಗಿರಲಿಲ್ಲ. ಈ ವಿಡಿಯೋ ನೋಡಿ ಕೇವಲ ನಟಿ ರಶ್ಮಿಕಾ ಮಾತ್ರ ದಂಗಾಗಿರಲಿಲ್ಲ. ಝಕಾ ಪಟೇಲ್ ಅನ್ನೊ ಯುವತಿ ಕೂಡ ಶಾಕ್ ಆಗಿದ್ದರು. ಬಿಕಾಸ್ ಈ ವಿಡಿಯೋ ಅಸಲಿಗೆ ಅವರದ್ದಾಗಿತ್ತು. ಇಲ್ಲಿ ದೇಹದ ಭಾಗ ಮಾತ್ರ ಅವರದ್ದಾಗಿದ್ದು, ಮುಖ ರಶ್ಮಿಕಾ ಅವರದ್ದಾಗಿತ್ತು. ಹಾಗಾದ್ರೆ ರಶ್ಮಿಕಾ ಮುಖ ಇಲ್ಲಿ ಹೇಗೆ ಬಂತು ಅನ್ನೊದು ಆಕೆಗೂ ಕಾಡಿದ್ದ ಪ್ರಶ್ನೆ. ಇದೆಲ್ಲ ಅವಾಂತರ ಹಿಂದಿರೋ ಕೈ ಯಾರದ್ದು ಅಂತ ಹುಡುಕ್ತಾ ಹೋದ್ರೆ, ಆಗಲೇ ನೋಡಿ ಅಪರಾಧ ಜಗತ್ತಿನ ಹೊಸ ಅಧ್ಯಾಯ ಒಂದು ಸಿಕ್ಕಿತ್ತು. ಅದೇ ಡಿಜಿಟಲ್ ಫೇಕ್ ಟೆರರಿಸಂ. 

ಇದನ್ನೂ ವೀಕ್ಷಿಸಿ:  Today Horoscope: ಈ ರಾಶಿಯವರು ಇಂದು ಸ್ನೇಹಿತರ ಬಗ್ಗೆ ಎಚ್ಚರವಾಗಿರಿ..ಆರೋಗ್ಯದ ಕಡೆ ಜಾಗ್ರತೆ ವಹಿಸಿ

Related Video