Asianet Suvarna News Asianet Suvarna News

Murder Sketch: ಸೋಲಿನ ಹತಾಶೆಯೇ BJP MLA ಕೊಲೆ ಸ್ಕೆಚ್‌ಗೆ ಕಾರಣವಾಯ್ತಾ?

Dec 2, 2021, 2:40 PM IST
  • facebook-logo
  • twitter-logo
  • whatsapp-logo

ಬೆಂಗಳೂರು(ಡಿ.02): ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಬ್ರೇಕ್‌ ಮಾಡಿದ ಸುದ್ದಿಯೊಂದು ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದೆ. ಒಬ್ಬ ಎಂಎಲ್‌ಎ ಜೀವ ತೆಗೆಯೋದಕ್ಕೆ ಸುಪಾರಿ ಕೊಡೋ ಮಾತುಕತೆ ರಾಜ್ಯಾದ್ಯಂತ ಸದ್ದು ಮಾಡಿದೆ. ಒಂದೇ ಒಂದು ವಿಡಿಯೋ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ. ಕಾಂಗ್ರೆಸ್‌ ಮುಖಂಡನೊಬ್ಬ ಬಿಜೆಪಿ ಶಾಸಕನ ಹತ್ಯೆಗೆ ಸ್ಕೆಚ್‌ ಹಾಕಿರುವ ಬಗ್ಗೆ ಮಾತನಾಡಿರುವ ವಿಡಿಯೋದಲ್ಲಿ ಮುಚ್ಚಿಟ್ಟುಕೊಳ್ಳೋಕೆ ಯಾವ ಅಂಶಗಳೂ ಇಲ್ಲ.   

ಎರಡು ಪಕ್ಷಗಳ ರಾಜಕೀಯ ತಿಕ್ಕಾಟ, ದ್ವೇಷ, ಯಾವ ಹಂತಕ್ಕೆ ಹೋಗಬಹುದು ಅನ್ನೋದನ್ನ ಅದೊಂದು ವಿಡಿಯೋ ಹೇಳ್ತಾಇದೆ. ಕಾಂಗ್ರೆಸ್‌ ಮುಖಂಡ ಗೋಪಾಲಕೃಷ್ಣ ಅವರು ಮಾತನಾಡಿರುವ ವಿಡಿಯೋ ಇಡೀ ಪ್ರಕರಣದ ಹೈಲೈಟ್‌ ಆಗಿದೆ. ಯಲಹಂಕ ಕ್ಷೇತ್ರದ ಬಿಜೆಪಿ ಶಾಸಕ ಎಸ್‌.ಆರ್‌ ವಿಶ್ವನಾಥ್‌ ಅವರನ್ನ ಹೇಗಾದರೂ ಮಾಡಿ ಮುಗಿಸಬೇಕು ಎಷ್ಟು ಹಣ ಬೇಕಾದರೂ ಹೋಗಲಿ ಅಂತ ಮಾತನಾಡಿದ್ದಾರೆ. 

SR Vishwanath Murder Conspiracy: ದೂರು ಕೊಡುವಲ್ಲಿಯೇ ಎಡವಿದರಾ ಶಾಸಕ..?

ಕಳೆದ ಬಾರಿಯ ಚುನಾವಣೆಯಲ್ಲಿ ಎಸ್‌.ಆರ್‌. ವಿಶ್ವನಾಥ್‌ ಎದುರು ಗೋಪಾಲಕೃಷ್ಣ ಸ್ಪರ್ಧಿಸಿ ಪರಾಭವಗೊಂಡಿದ್ದರು. ಇದೀಗ ಮತ್ತೊಮ್ಮೆ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂಬ ಇರಾದೆಯನ್ನೂ ಕೂಡ ಹೊಂದಿದ್ದಾರೆ ಗೋಪಾಲಕೃಷ್ಣ. ಆದರೆ, ವಿಶ್ವನಾಥ್‌ ಮುಂದೆ ಗೆಲ್ಲೋದು ಸಾಧ್ಯವೇ ಇಲ್ಲ ಅಂತ ಅನಿಸಿರಬೇಕು. ಹೀಗಾಗಿ ವಿಶ್ವನಾಥ್‌ ಅವರನ್ನ ಕೊಂದು ಹಾಕಬೇಕು ಅನ್ನೋ ವಿಚಾರಕ್ಕೆ ಬಂದಿದ್ದಾರೆ. ಇದೆಲ್ಲದರ ಕಂಪ್ಲೀಟ್‌ ಮಾಹಿತಿ ಈ ವಿಡಿಯೋದಲ್ಲಿದೆ.
 

Video Top Stories