Asianet Suvarna News Asianet Suvarna News

SR Vishwanath Murder Conspiracy: ದೂರು ಕೊಡುವಲ್ಲಿಯೇ ಎಡವಿದರಾ ಶಾಸಕ..?

Dec 2, 2021, 10:19 AM IST
  • facebook-logo
  • twitter-logo
  • whatsapp-logo

ಬೆಂಗಳೂರು ( ಡಿ.02): ಶಾಸಕ ವಿಶ್ವನಾಥ್ (SR Vishwanath) ಹತ್ಯೆಗೆ ಸ್ಕೆಚ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ಕೊಡುವಲ್ಲಿಯೇ ಎಡವಿದರಾ..? ಆರೋಪಿಗಳ ಮೇಲೆ ಕ್ರಮ ಕೈಗೊಳ್ಳಲು ಖಾಕಿ (Police) ಪಡೆಗೆ ಹಿನ್ನಡೆ ಆಯ್ತಾ..? ಇದೀಗ  ಯಲಹಂಕ (Yalahanka ) ಶಾಸಕ ವಿಶ್ವನಾಥ್  ಹತ್ಯೆಗೆ  ಸಂಚು ಪ್ರಕರಣ ಇದೀಗ ಹಲವಾರು ಪ್ರಶ್ನೆಗಳನ್ನು  ಹುಟ್ಟು ಹಾಕುತ್ತಿದೆ. ಅಲ್ಲದೆ ವಿಶ್ವನಾಥ್ ಅವರಿಗೆ ತಮ್ಮ ಜೀವಕ್ಕಿಂತಲೂ  ಭೂ ವ್ಯಾಜ್ಯವೇ  ಹೆಚ್ಚಾಯ್ತಾ ಎನ್ನುವ ಪ್ರಶ್ನೆಯೂ  ಮೂಡಿದೆ.  

Murder Sketch: ಸುಪಾರಿ ಕೊಲೆಗೆ ಇಳಿದ ರಾಜ್ಯ ರಾಜಕಾರಣ, ವಿಶ್ವನಾಥ್, ಗೋಪಾಲಕೃಷ್ಣ ಜಟಾಪಟಿ ಶುರು!

ತಾವು ನೀಡಿದ  ದೂರಿನಲ್ಲಿ (Complaint)  ವಿಶ್ವನಾಥ್ ಅವರು ಹತ್ಯೆ ಬಗ್ಗೆ ಯಾವುದೇ ರೀತಿಯ ಗಂಭೀರ ಆರೋಪವನ್ನು ಮಾಡಿಲ್ಲ. ಸುಪಾರಿ ನೀಡಿದ ಬಗೆಗಿನ ವಿಡಿಯೋ  ಇದ್ದರೂ ಸಹ  ಗೋಪಾಲ ಕೃಷ್ಣ ಅವರ ಬಂಧನಕ್ಕೆ ಒತ್ತಾಯ ಮಾಡಿಲ್ಲ ಎನ್ನುವುದು ಬೆಳಕಿಗೆ ಬಂದಿದೆ. ಅಲ್ಲದೇ ಬಿಜೆಪಿ ನಾಯಕರಿಂದಲೂ ಈ ಬಗ್ಗೆ ನೆಪ ಮಾತ್ರದ ಖಂಡನೆ ವ್ಯಕ್ತವಾಗಿದೆ.   ಅಲ್ಲದೇ ಕೇವಲ ಸುದ್ದಿ ಮಾಡುವ ಉದ್ದೇಶಕ್ಕೆ ಪ್ರಕರಣವನ್ನು ಬಯಲಿಗೆ  ತಂದರಾ ಎನ್ನುವುದು ಪ್ರಶ್ನೆಯಾಗಿ ಉಳಿದಿದೆ. 

Video Top Stories