Asianet Suvarna News Asianet Suvarna News

ಮಹಿಳೆಯರಿಗೆ ಉಚಿತ ಪ್ರಯಾಣ ಹಿನ್ನೆಲೆ: ಬಸ್‌ ಮಾರಾಟಕ್ಕಿದೆ ಎಂದು ಪೋಸ್ಟರ್ !

ಕಾಂಗ್ರೆಸ್‌ ಸರ್ಕಾರದ ಉಚಿತ ಬಸ್‌ ಯೋಜನೆ ಸೌಲಭ್ಯದ ವಿರುದ್ಧ ಖಾಸಗಿ ಬಸ್‌ ಮಾಲೀಕರು ಕಿಡಿಕಾರಿದ್ದಾರೆ.
 

ಮಹಿಳೆಯರಿಗೆ ಉಚಿತ ಪ್ರಯಾಣ ಒದಗಿಸುವ ಶಕ್ತಿ ಯೋಜನೆ ವಿರುದ್ಧ ಖಾಸಗಿ ಬಸ್‌ ಮಾಲೀಕರು ಕಿಡಿಕಾರಿದ್ದಾರೆ. ಬಸ್‌ ಮಾರಾಟಕ್ಕಿದೆ ಎಂದು ಪೋಸ್ಟರ್‌ ಅಂಟಿಸಿ ಆಕ್ರೋಶ ಹೊರಹಾಕಿದ್ದಾರೆ. ಸರ್ಕಾರದ ಯೋಜನೆಯಿಂದ ಖಾಸಗಿ ಬಸ್‌ ಮಾಲೀಕರು ಮತ್ತಷ್ಟು ಸಂಕಷ್ಟಕ್ಕೊಳಗಾಗಲಿದ್ದಾರೆ ಎಂದು ನೋವು ತೋಡಿಕೊಂಡಿದ್ದಾರೆ. ಸರ್ಕಾರದ ಫ್ರೀ ಸ್ಕೀಮ್‌ನಿಂದ ನೂರಾರು ಕುಟುಂಬಗಳು ಬೀದಿಗೆ ಬರುವ ಆತಂಕ ಈಗ ಶುರುವಾಗಿದೆ. ಹಾಗಾಗಿ ಖಾಸಗಿ ಬಸ್‌ ಮಾಲೀಕರು, ಬಸ್‌ ಮಾರಾಟಕ್ಕೆ ಇದೆ ಎಂದು ಪೋಸ್ಟರ್‌ ಅಂಟಿಸಿದ್ದಾರೆ. ಜನ ಎಲ್ಲಾ ಕೆಎಸ್‌ಆರ್‌ಟಿಸಿ ಬಸ್‌ ಗೆ ಹೋದ್ರೆ, ನಾವೆಲ್ಲಾ ಏನು ಮಾಡಬೇಕು. ನಮ್ಮನ್ನು ನಂಬಿಕೊಂಡು ಹಲವಾರು ಕುಟುಂಬಗಳು ಜೀವನ ನಡೆಸುತ್ತಿವೆ ಎಂದು ಖಾಸಗಿ ಬಸ್‌ ಮಾಲೀಕರೊಬ್ಬರು ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ: ಅಂಗನವಾಡಿ ಕಾರ್ಯಕರ್ತೆಯರ ಸಂಬಳ ಹೆಚ್ಚಳ ಗ್ಯಾರಂಟಿ ಜಾರಿಗೆ ಪಟ್ಟು!