ಕೇಸರಿ ಕೋಟೆಯಲ್ಲಿ ರಾಜ್ಯಾಧ್ಯಕ್ಷ ಪಟ್ಟಕ್ಕೆ ಬಿಗ್ ಫೈಟ್: ಬಿಜೆಪಿ ಹೈಕಮಾಂಡ್ ಒಲವು ಯಾರ ಕಡೆ..?

ಯಾರಾಗ್ತಾರೆ ರಾಜ್ಯ ಬಿಜೆಪಿಗೆ ಹೊಸ ಅಧ್ಯಕ್ಷ..? ಯಾರಿಗೆ ಸಾರಥ್ಯ..?
ಲೋಕಸಂಗ್ರಾಮದಲ್ಲಿ ಪಕ್ಷವನ್ನು ಮುನ್ನಡೆಸುವ ಸೇನಾಧ್ಯಕ್ಷ ಯಾರು..?
ರಾಜ್ಯಾಧ್ಯಕ್ಷರಾಗಲು ಓಪನ್ ಆಗಿ ಅಖಾಡಕ್ಕಿಳಿದ ಮಾಜಿ ಸಚಿವ ಸೋಮಣ್ಣ..!    

Share this Video
  • FB
  • Linkdin
  • Whatsapp

ರಾಜ್ಯ ಕಮಲಾಧಿಪತಿ ಪಟ್ಟಕ್ಕೆ ನಾನು ಆಕಾಂಕ್ಷಿ ಅಂತ ಮಾಜಿ ಸಚಿವ ಸೋಮಣ್ಣ ಓಪನ್ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ. ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಕೂಡ ರಾಜ್ಯಾಧ್ಯಕ್ಷ ರೇಸ್‌ನಲ್ಲಿದ್ದಾರೆ. ಇನ್ನು ಕೆಲವರದ್ದು ತೆರೆಯ ಹಿಂದಿನ ಆಟ. ರಾಜ್ಯಾಧ್ಯಕ್ಷರ ಆಯ್ಕೆಯ ಕಸರತ್ತು ಒಂದು ಕಡೆಯಾದ್ರೆ, ಮತ್ತೊಂದ್ಕಡೆ ಪ್ರತಿಪಕ್ಷ ನಾಯಕನ ಆಯ್ಕೆಯ ಸವಾಲು. ಹಾಗಾದ್ರೆ ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯನವರನ್ನು ಎದುರಿಸಿ ನಿಲ್ಲುವ ಕೇಸರಿ ಕಲಿ ಯಾರು ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ರಾಜ್ಯ ಬಿಜೆಪಿಗೆ ಹೊಸ ಅಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕನ ನೇಮಕವಾಗಲಿದೆ. ರಾಜ್ಯಾಧ್ಯಕ್ಷ ಪಟ್ಟಕ್ಕೆ ಹಲವರು ರೇಸ್‌ನಲ್ಲಿದ್ದರೇ, ಇನ್ನು ಕೆಲವರು ವಿರೋಧ ಪಕ್ಷದ ನಾಯಕನ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

ಇದನ್ನೂ ವೀಕ್ಷಿಸಿ: ರಷ್ಯಾ ವಿರುದ್ಧವೇ ತಿರುಗಿ ಬಿದ್ದ ವ್ಯಾಗ್ನರ್‌ ಪಡೆ: ನನ್ನ ಬೆನ್ನಿಗೆ ಚೂರಿ ಇರಿದರು ಎಂದ ಪುಟಿನ್‌

Related Video