Asianet Suvarna News Asianet Suvarna News

ಸಿನಿಮಾ ಡೈಲಾಗ್‌ಗಳಿಂದ ರಾಜಕೀಯ ಹೆಚ್ಚು ದಿನ ನಡೆಯಲ್ಲ: ಡಾ.ಸುಧಾಕರ್‌

ಸುಳ್ಳೆ ಅವರ ಮನೆ ದೇವರು ಅನ್ನೋ ರೀತಿಯಲ್ಲಿ ಪ್ರದೀಪ್‌ ಈಶ್ವರ್‌ ಮಾತನಾಡುತ್ತಿದ್ದಾರೆ ಎಂದು ಮಾಜಿ ಸಚಿವ ಡಾ. ಸುಧಾಕರ್‌ ಕಿಡಿಕಾರಿದ್ದಾರೆ.

ಚಿಕ್ಕಬಳ್ಳಾಪುರ: ಮಾಜಿ ಸಚಿವ ಡಾ. ಸುಧಾಕರ್ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಚಿಕ್ಕಬಳ್ಳಾಪುರದಲ್ಲಿ ಆಕ್ರೋಶವನ್ನು ಹೊರಹಾಕಿದ್ದಾರೆ. ಚಿಕ್ಕಬಳ್ಳಾಪುರ ವಸತಿ ಯೋಜನೆಗಳ ಬಗ್ಗೆ ಶಾಸಕರು ಸುಳ್ಳಿನ ಅಭಿಯಾನ ನಡೆಸಿದ್ದಾರೆ. ಸುಳ್ಳೆ ಅವರ ಮನೆ ದೇವರು ಅನ್ನೋ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಈಗಷ್ಟೇ ವಿಧಾನಸಭೆ ಪ್ರವೇಶ ಮಾಡಿದ್ದಾರೆ. ಅಲ್ಲಿ ತಿಳಿದುಕೊಳ್ಳಲಿ ಯಾರಾದ್ರು 20 ಸಾವಿರ ನಿವೇಶನ ತಂದಿದ್ದಾರಾ ನೋಡಲಿ ಎಂದು ಕಿಡಿಕಾರಿದ್ದಾರೆ. ಸಿನಿಮಾ ಡೈಲಾಗ್‌ಗಳನ್ನು ಹಾಕಿಕೊಂಡು ಓಡಾಡಿದ್ರೆ ರಾಜಕೀಯ ತುಂಬಾ ದಿನ‌ ನಡೆಯಲ್ಲ.ನಿವೇಶನಗಳಿಗೆ ಜಮೀನು ಮಂಜೂರು ಮಾಡಿದ್ದೀನಿ ಅಂತಾ ನಂದಿ ದೇವಸ್ಥಾನದಲ್ಲಿ ದೀಪ ಹಚ್ಚುತ್ತೇನೆ.ಇದೆಲ್ಲಾ ಬೋಗಸ್ ಅಂತಾ ನೀವು ಬಂದು ಹಚ್ಚಿ ನೋಡೊಣ ಎಂದು ಪ್ರದೀಪ್ ಈಶ್ವರ್‌ಗೆ ಸುಧಾಕರ್‌ ಸವಾಲು ಹಾಕಿದ್ದಾರೆ.

ಇದನ್ನೂ ವೀಕ್ಷಿಸಿ:  ಯಾರೇ ಏನೇ ಮಾಡಿದರು ನಾನು ಹೆದರಲ್ಲ, ದೇವಸ್ಥಾನಕ್ಕೆ ಹೋಗಿಯೇ ಹೋಗುತ್ತೇನೆ: ಸಾರಾ

Video Top Stories