ಯಾರೇ ಏನೇ ಮಾಡಿದರು ನಾನು ಹೆದರಲ್ಲ, ದೇವಸ್ಥಾನಕ್ಕೆ ಹೋಗಿಯೇ ಹೋಗುತ್ತೇನೆ: ಸಾರಾ

ಸಾರಾ ಅಲಿ ಖಾನ್​ ನಟನೆಯ ‘ಜರಾ ಹಟ್ಕೆ ಜರಾ ಬಚ್ಕೆ’ ಸಿನಿಮಾ ಹಿಟ್​ ಆಗಿದೆ. ಈ ಹಿನ್ನೆಲೆ ಅವರು ಹಲವಾರು ಹಿಂದೂ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ.

First Published Jul 3, 2023, 2:22 PM IST | Last Updated Jul 3, 2023, 2:22 PM IST

ಸೈಫ್ ಅಲಿ ಖಾನ್ ಮಗಳು ನಟಿ ಸಾರಾ ಅಲಿ ಖಾನ್ ವಿಕ್ಕಿ ಕೌಶಲ್​ ಜೊತೆ  ನಟಿಸಿದ ‘ಜರಾ ಹಟ್ಕೆ ಜರಾ ಬಚ್ಕೆ’ ಸಿನಿಮಾ ಹಿಟ್​ ಆಗಿದೆ. ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾ 80 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್​ ಮಾಡಿದೆ. ಈ ಹಿನ್ನೆಲೆ ಅವರು ಎಲ್ಲಾ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ಇದೆ ವೇಳೆ ಟ್ರೋಲಿಗರು ನಟಿ ಕಾಲೆಳೆಯುತ್ತಿದ್ದು, ದೇವಾಲಯಕ್ಕೆ ಹೋಗುವುದನ್ನು ನೀನು ಬಿಡುವುದಿಲ್ವಾ ಎಂದು ಕೇಳುತ್ತಿದ್ದಾರೆ. ಇದಕ್ಕೆ ಸಾರಾ ಖಡಕ್ ಆಗಿಯೇ ಉತ್ತರ ಕೊಟ್ಟಿದ್ದಾರೆ. ಸಾರಾಗೆ ದೈವ ಭಕ್ತಿ ಜಾಸ್ತಿ ಇದ್ದು, ಹಲವಾರು ದೇವಸ್ಥಾನಗಳಿಗೆ ಭೇಟಿ ನೀಡುತ್ತಿರುತ್ತಾರೆ. ಅವರನ್ನು ನೆಟ್ಟಿಗರು ನೆಪೋ ಕಿಡ್​ ಎಂದು ಕರೆಯುತ್ತಾರೆ. ಇದು ನಿಮಗೆ ಸರಿ ಎನಿಸಿದರೆ ಓಕೆ. ನಿಮಗೆ ಇಷ್ಟ ಆಗುತ್ತಿಲ್ಲ ಎಂದ ಮಾತ್ರಕ್ಕೆ ನಾನು ದೇವಸ್ಥಾನಕ್ಕೆ ಹೋಗುವುದನ್ನು ನಿಲ್ಲಿಸುವುದಿಲ್ಲ ಎಂದು ಸಾರಾ ಆಲಿ ಖಾನ್​  ಟ್ರೋಲ್‌ ಮಾಡುವವರಿಗೆ ತಿರುಗೇಟು ನೀಡಿದ್ದಾರೆ. 

ಇದನ್ನೂ ವೀಕ್ಷಿಸಿ: ಮತ್ತೆ 'ನಮೋ ಭೂತಾತ್ಮ' ಎಂದ ಕೋಮಲ್: ಸಿನಿಮಾ ಟೀಸರ್ ರಿಲೀಸ್ ಮಾಡಿದ ಧ್ರುವ!