ಡಿಕೆಶಿ ಚನ್ನಪಟ್ಟಣ ಬೈ ಎಲೆಕ್ಷನ್‌ನಲ್ಲಿ ಸ್ಪರ್ಧಿಸುವ ವಿಚಾರ ನನ್ನ ಮುಂದೆ ಚರ್ಚೆ ಆಗಿಲ್ಲ: ಡಿಕೆ ಸುರೇಶ್
ಚನ್ನಪಟ್ಟಣ ಬೈ ಎಲೆಕ್ಷನ್‌ನಲ್ಲಿ ಕಾಂಗ್ರೆಸ್ ಪಕ್ಷ ತೀರ್ಮಾನ ಮಾಡಿ ಒಳ್ಳೆಯ ಅಭ್ಯರ್ಥಿಯನ್ನು ಚುನಾವಣೆಗೆ ನಿಲ್ಲಿಸುತ್ತದೆ ಎಂದು ಮಾಜಿ ಸಂಸದ ಡಿಕೆ ಸುರೇಶ್ ಹೇಳಿದ್ದಾರೆ.
ಚನ್ನಪಟ್ಟಣ ಬೈ ಎಲೆಕ್ಷನ್‌ನಲ್ಲಿ(Channapatna By Election) ಡಿಕೆ ಶಿವಕುಮಾರ್(DK Shivakumar) ಸ್ಪರ್ಧೆ ಮಾಡುತ್ತಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಡಿಕೆ ಸುರೇಶ್(DK Suresh) ಮಾತನಾಡಿದ್ದಾರೆ. ಈ ಬಗ್ಗೆ ನನ್ನ ಮುಂದೆ ಚರ್ಚೆ ಇಲ್ಲ. ಕಾಂಗ್ರೆಸ್(Congress) ಪಕ್ಷ ತೀರ್ಮಾನ ಮಾಡಿ ಒಳ್ಳೆಯ ಅಭ್ಯರ್ಥಿಯನ್ನು ಚುನಾವಣೆಗೆ ನಿಲ್ಲಿಸುತ್ತದೆ. ನಾನು ಕೂಡ ಒಬ್ಬ ಕಾರ್ಯಕರ್ತನಾಗಿ ಚುನಾವಣಾ ಕೆಲಸ ಮಾಡ್ತೀನಿ. ರಾಜೀನಾಮೆ ಕೊಟ್ಟು ಈಗ ಒಂದು ವಾರ ಆಗಿದೆ. ಈ ರಾಜ್ಯದ ಡಿಸಿಎಂ ಡಿಕೆ ಶಿವಕುಮಾರ್ ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದಾರೆ. ಚನ್ನಪಟ್ಟಣ ಕ್ಷೇತ್ರ ಇದೀಗ ತೆರವಾಗಿದೆ. ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಸಭೆ ಮಾಡ್ತಾ ಇದ್ದಾರೆ. ನಾನು ಯಾವುದೇ ಚುನಾವಣೆ ಸ್ಪರ್ಧೆ ಮಾಡೊಲ್ಲ. ಇದೆಲ್ಲವೂ ಮಾಧ್ಯಮಗಳ ಊಹಾಪೋಹ. ನಾನು ಒತ್ತಡದಲ್ಲಿದ್ದೆ, ಸದ್ಯ ಅದರಿಂದ ಹೊರಗಡೆ ಬಂದಿದ್ದೇನೆ. ಜನ ರೆಸ್ಟ್ ಕೊಟ್ಟಿದ್ದಾರೆ. ಬೇರೆಯವರು ಹೇಗೆ 20 ದಿನಗಳಲ್ಲಿ ಚುನಾವಣೆ ಮಾಡಿದ್ರೂ ಅದೇ ರೀತಿ ನಾನು ಚುನಾವಣೆ ಮಾಡ್ತೇನೆ ಎಂದು ಮಾಗಡಿಯಲ್ಲಿ ಮಾಜಿ ಸಂಸದ ಡಿಕೆ ಸುರೇಶ್ ಹೇಳಿದ್ದಾರೆ.
ಇದನ್ನೂ ವೀಕ್ಷಿಸಿ: ಬೆಂಗಳೂರು ಜೈಲಿನಿಂದ ತುಮಕೂರಿಗೆ ಶಿಫ್ಟ್ ಆಗ್ತಾರಾ ಕೆಲ ಆರೋಪಿಗಳು ? ಈ ಬಗ್ಗೆ ಪೊಲೀಸರಿಂದ ಕೋರ್ಟ್‌ಗೆ ಮನವಿ !