ಬೆಂಗಳೂರು ಜೈಲಿನಿಂದ ತುಮಕೂರಿಗೆ ಶಿಫ್ಟ್ ಆಗ್ತಾರಾ ಕೆಲ ಆರೋಪಿಗಳು ? ಈ ಬಗ್ಗೆ ಪೊಲೀಸರಿಂದ ಕೋರ್ಟ್‌ಗೆ ಮನವಿ !

ತುಮಕೂರು ಜೈಲಿಗೆ ಶಿಫ್ಟ್ ಆಗ್ತಾರಾ ಕೆಲ ಆರೋಪಿಗಳು ?
ಶಿಫ್ಟ್ ಮಾಡುವಂತೆ ಪೊಲೀಸರಿಂದ ಕೋರ್ಟ್ ಮನವಿ..!
ಸಹ ಆರೋಪಿಗಳ ಮೇಲೆ ಹಲ್ಲೆ ನಡೆಯುವ ಸಾಧ್ಯತೆ..!
 

First Published Jun 24, 2024, 12:21 PM IST | Last Updated Jun 24, 2024, 12:21 PM IST

ದರ್ಶನ್ &ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ(Renukaswamy murder case) ಸಂಬಂಧಿಸಿದಂತೆ ಕೆಲವು ಆರೋಪಿಗಳನ್ನು ಬೆಂಗಳೂರಿನ ಜೈಲಿನಿಂದ(Bengaluru jail) ತುಮಕೂರು ಜೈಲಿಗೆ ಶಿಫ್ಟ್ ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ಪೊಲೀಸರು ಕೋರ್ಟ್‌ಗೆ ಮನವಿ ಮಾಡಿಕೊಂಡಿದ್ದಾರೆ. ದರ್ಶನ್ (Darshan) ಗ್ಯಾಂಗ್‌ನಿಂದಲೇ ಸಹ ಆರೋಪಿಗಳ ಮೇಲೆ ಹಲ್ಲೆ(Attack) ನಡೆಯುವ ಸಾಧ್ಯತೆ ಇದೆಯಂತೆ. ಇದೇ ಕೇಸಿನ‌ ಆರೋಪಿಗಳು ತಮ್ಮ ಗ್ಯಾಂಗ್ ಸದಸ್ಯರ ಮೇಲೆ‌ ಹಲ್ಲೆ ನಡೆಸಬಹುದು ಎಂದು ತನಿಖಾಧಿಕಾರಿ ಅನುಮಾನ ವ್ಯಕ್ತಪಡಿಸಿದ್ದಾರೆ. ಇಂದು ಆರೋಪಿಗಳ ಶಿಫ್ಟ್ ವಿಚಾರ ನಿರ್ಧಾರ ಆಗಲಿದೆ. ಪೊಲೀಸರ ಮನವಿಗೆ ಆರೋಪಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ ಇಂದು ವಿಚಾರಣೆ ನಡೆಸುವುದಾಗಿ ನ್ಯಾಯಾಧೀಶರು ಹೇಳಿದ್ದಾರೆ. 24ನೇ ಎಸಿಎಂಎಂ ಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ. ಸದ್ಯ ಯಾರ ಮೇಲೆ ಹಲ್ಲೆ ಸಾಧ್ಯತೆ ಎಂಬ ವಿಚಾರವನ್ನು ಪೊಲೀಸರು ಗೌಪ್ಯವಾಗಿಟ್ಟಿದ್ದಾರೆ. 

ಇದನ್ನೂ ವೀಕ್ಷಿಸಿ:  ಬಿ.ಕೆ. ಸಿಂಗ್ ನೇತೃತ್ವದಲ್ಲಿ ಸೂರಜ್ ರೇವಣ್ಣ ಪ್ರಕರಣದ ತನಿಖೆ: ಹೇಗಿರಲಿದೆ ಸಿಐಡಿ ತನಿಖೆ?