Asianet Suvarna News Asianet Suvarna News

ಇಡೀ ಸರ್ಕಾರಕ್ಕೆ ಕಾಂಗ್ರೆಸ್ ಅಧ್ಯಕ್ಷರ ಫರ್ಮಾನು..ಏನಿದರ ಗುಟ್ಟು..? ಏನಿದು ಬಂಡೆ ಮಾಡಿದ ಶಪಥ..?

ಪದತ್ಯಾಗದ ಹೊಸ್ತಿಲಲ್ಲಿ ರಾಜ್ಯ ಕಾಂಗ್ರೆಸ್‌ನ ಪವರ್‌ಫುಲ್ ಅಧ್ಯಕ್ಷ..! 
10 ವರ್ಷದ ಸರ್ಕಾರ ಕಟ್ಟಲು ಡಿಕೆ ಸಾಹೇಬನ ಮಾಸ್ಟರ್‌ಪ್ಲಾನ್..!
ಕಾಂಗ್ರೆಸ್ ಹೆಡ್ ಆಫೀಸ್‌ನಲ್ಲಿ ಶುರುವಾಗಲಿದೆ ಸಿದ್ದು ಒಡ್ಡೋಲಗ..!        
 

ಪದತ್ಯಾಗದ ಹೊಸ್ತಿಲಲ್ಲಿ ನಿಂತಿದ್ದಾರೆ ರಾಜ್ಯ ಕಾಂಗ್ರೆಸ್‌ನ(Congress) ಪವರ್ ಫುಲ್ ಅಧ್ಯಕ್ಷ. ಪದಗ್ರಹಣಕ್ಕೂ ಮುನ್ನ ಮಾಡಿದ್ದ ಪ್ರತಿಜ್ಞೆಯಲ್ಲಿ ಗೆದ್ದ ಕೆಪಿಸಿಸಿ ಅಧ್ಯಕ್ಷರಿಂದ ಈಗ ಮತ್ತೊಂದು ಶಪಥ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ.. ಕರ್ನಾಟಕದಲ್ಲಿ(Karnataka) ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದ ಅಧ್ಯಕ್ಷ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್(DK Shivakumar) ಅವರ ನಾಲ್ಕು ವರ್ಷಗಳ ಅಧಿಕಾರಾವಧಿ ಕೊನೆ ಹಂತದಲ್ಲಿದೆ. ರಾಜ್ಯ ಕಾಂಗ್ರೆಸ್‌ಗೆ ಹೊಸ ಸಾರಥಿ ಬರೋದು ಪಕ್ಕಾ ಆಗಿದ್ದು, ಸ್ವತಃ ಡಿಕೆ ಶಿವಕುಮಾರ್ ಅವ್ರೇ ಅದ್ರ ಸುಳಿವು ಬಿಟ್ಟು ಕೊಟ್ಟಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌ ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ತಂದಿರೋ ಡಿಕೆ ಶಿವಕುಮಾರ್, ಪದತ್ಯಾಗದ ಹೊಸ್ತಿಲಲ್ಲಿ ನಿಂತಿದ್ದಾರೆ. 2020ರ ಜುಲೈ ತಿಂಗಳಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ್ದ ಡಿಕೆ ಶಿವಕುಮಾರ್, ಇಲ್ಲಿವರೆಗೆ ಕಾಂಗ್ರೆಸ್ ಪಕ್ಷವನ್ನು ಸಾಲಿಡ್ ಆಗಿ ಸಂಘಟಿಸಿದ್ದಾರೆ. ಇಡೀ ದೇಶದಲ್ಲೇ ಕಾಂಗ್ರೆಸ್ ಯಾವುದಾದ್ರೊಂದು ರಾಜ್ಯದಲ್ಲಿ ಬಿಜೆಪಿಗಿಂತ(BJP) ಬಲಾಢ್ಯವಾಗಿದೆ ಅಂದ್ರೆ ಅದು ಕರ್ನಾಟಕದಲ್ಲಿ ಮಾತ್ರ. ಇದಕ್ಕೆ ಕಾರಣ ಡಿಕೆ ಶಿವಕುಮಾರ್ ಅವ್ರ ಸಂಘಟನಾ ಶಕ್ತಿ. ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾದ ನಂತ್ರ ರಾಜ್ಯದಲ್ಲಿ ಫೀನಿಕ್ಸ್'ನಂತೆ ಮೇಲೆದ್ದು ನಿಂತಿರೋ ಕಾಂಗ್ರೆಸ್, ವರ್ಷದ ಹಿಂದೆ ಅಧಿಕಾರಕ್ಕೂ ಬಂದಿದ್ದು, ರಾಜ್ಯ ರಾಜಕಾರಣದಲ್ಲಿ ಸದ್ಯ ಡ್ರೈವರ್ ಸೀಟಿನಲ್ಲಿದೆ. ಪಕ್ಷಕ್ಕೆ ಅಷ್ಟರ ಮಟ್ಟಿಗೆ ಶಕ್ತಿ ಕೊಟ್ಟಿದ್ದಾರೆ ಕಾರ್ಯಕರ್ತರ ನಾಯಕ ಅಂತಾನೇ ಕರೆಸಿಕೊಳ್ಳೋ ಡಿಕೆ ಶಿವಕುಮಾರ್. ಆದ್ರೆ ಈಗ ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆಶಿ ಅವ್ರ ಅಧಿಕಾರಾವಧಿ ಕೊನೆಗೊಳ್ಳುವ ದಿನಗಳು ಬತ್ತಿರ ಬರ್ತಾ ಇವೆ.

ಇದನ್ನೂ ವೀಕ್ಷಿಸಿ:  ಗುಜರಾತ್‌ನಲ್ಲಿ ಮೋದಿ ಹ್ಯಾಟ್ರಿಕ್ ಗೆಲುವು ಕಂಡಿದ್ದು ಹೇಗೆ? ನೆಹರು ನಂತರ 3ನೇ ಗೆಲುವು ಪಡೆದು ದಾಖಲೆ ಮಾಡ್ತಾರಾ ಪ್ರಧಾನಿ?