ಯೋಗೇಶ್ವರ್, ನಿಖಿಲ್ ಚನ್ನಪಟ್ಟಣ ಅಭ್ಯರ್ಥಿ ಯಾರು..? ಜನಸ್ಪಂದನ ಹೆಸರಲ್ಲಿ ಡಿಕೆ ಬ್ಯಾಕ್ ಟು ಬ್ಯಾಕ್ ವಿಸಿಟ್
ಮತದಾರರ ಸೆಳೆಯಲು ಖುದ್ದು ಅಖಾಡಕ್ಕೆ ಇಳಿದ ಡಿಕೆಶಿ
ಗ್ರಾಮಾಂತರ ಸೋಲನ್ನು ಸವಾಲಾಗಿ ಸ್ವೀಕರಿಸಿದ ಡಿಕೆಶಿ
15 ದಿನದಲ್ಲಿ 3ನೇ ಬಾರಿ ಚನ್ನಪಟ್ಟಣಕ್ಕೆ ಡಿಕೆಶಿ ವಿಸಿಟ್
ರಾಜ್ಯದಲ್ಲಿ ಚನ್ನಪಟ್ಟಣ(Channapatna) ಬೈ ಎಲೆಕ್ಷನ್ (By election) ಬ್ಯಾಟಲ್ ಕಾವೇರಿದ್ದು, ಜನಸ್ಪಂದನಾ (Janaspandana) ಹೆಸರಲ್ಲಿ ಡಿ.ಕೆ ಬ್ಯಾಕ್ TO ಬ್ಯಾಕ್ ವಿಸಿಟ್ ಮಾಡುತ್ತಿದ್ದಾರೆ. 15 ದಿನದಲ್ಲೇ ಮೂರನೇ ಬಾರಿ ಡಿ.ಕೆ.ಶಿವಕುಮಾರ್ (DK Shivakumar) ಭೇಟಿ ಮಾಡುತ್ತಿದ್ದಾರೆ. ಮೊದಲ ಬಾರಿ ಚನ್ನಪಟ್ಟಣದ 14 ದೇಗುಲವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸುತ್ತಿದ್ದಾರೆ. ಜನರ ನಾಡಿಮಿಡಿತ ಅರಿಯುವ ಪ್ರಯತ್ನ ಇದಾಗಿದೆ. ಸ್ಥಳೀಯರ ನಾಯಕರೊಂದಿಗೆ ಡಿಕೆ ಬ್ರದರ್ಸ್ ರಣತಂತ್ರ ಹೂಡುತ್ತಿದ್ದಾರೆ. ಇಂದಿನಿಂದ ಮೂರು ದಿನ ತಾಲೂಕಿನಲ್ಲೇ ಡಿಕೆಶಿ ಬೀಡು ಬಿಡಲಿದ್ದಾರೆ. ಚನ್ನಪಟ್ಟಣದಲ್ಲಿ ಜನರ ಅಹವಾಲು ಸ್ವೀಕಾರ ಮಾಡಲಿದ್ದಾರೆ. ಅಲ್ಲದೇ ಡಿಕೆಶಿಯೇ ಅಭ್ಯರ್ಥಿ ಆಗ್ತಾರಾ ಎಂಬ ಚರ್ಚೆ ಜೋರಾಗಿದೆ. ಡಿ.ಕೆ ಭೇಟಿಗೂ ಮುನ್ನ ಅಖಾಡಕ್ಕೆ ಎಚ್‌ಡಿಕೆ ಪುತ್ರ ಇಳಿದಿದ್ದಾರೆ. ಕಾರ್ಯಕರ್ತರ ಜೊತೆ ನಿಖಿಲ್ ಸಭೆ ಮಾಡಿದ್ದಾರೆ.
ಇದನ್ನೂ ವೀಕ್ಷಿಸಿ: ಹೆಚ್ಚುವರಿ ಡಿಸಿಎಂ VS ಸಿಎಂ ಬದಲಾವಣೆ ತಿಕ್ಕಾಟ ಎಲ್ಲಿಗೆ ಬಂತು ? ಹೈಕಮಾಂಡ್ ನಾಯಕರು ಕೊಟ್ಟ ಸೂಚನೆ ಏನು..?