ನ.15ಕ್ಕೆ ಮತ್ತೊಂದು ಸುತ್ತಿನ ಕಾಂಗ್ರೆಸ್ ಸೇರ್ಪಡೆ ಎಂದ ಡಿಕೆಶಿ: ತಿಂಗಳಿಗೆ ಕನಿಷ್ಠ 3 ಪಕ್ಷ ಸೇರ್ಪಡೆ ಕಾರ್ಯಕ್ರಮ ಆಯೋಜನೆ ?

ಪಕ್ಷ ಸೇರದಿದ್ದವರಿಗೆ ಕೋ ಆಪರೇಷನ್ ಹೆಸರಲ್ಲಿ ಆಪರೇಷನ್! 
ಲೋಕಸಭೆ ಚುನಾವಣೆ ಗೆಲ್ಲಲು ಸಹಕಾರ ನೀಡುವಂತೆ ಒಪ್ಪಂದ
ಲೋಕಸಭೆ ಚುನಾವಣೆ ಹೊತ್ತಲ್ಲೇ ಪಕ್ಷಾಂತರ ಪಾಲಿಟಿಕ್ಸ್ ಫಿಕ್ಸ್..!

Share this Video
  • FB
  • Linkdin
  • Whatsapp

ರಾಜ್ಯ ರಾಜಕೀಯದಲ್ಲಿ ಅಪರೇಷನ್ ಪಾಲಿಟಿಕ್ಸ್ ಭಾರೀ ಸದ್ದು ಮಾಡ್ತಿದೆ. ನವೆಂಬರ್ 15ಕ್ಕೆ ಮತ್ತೊಂದು ಸುತ್ತಿನ ಕಾಂಗ್ರೆಸ್(Congress) ಸೇರ್ಪಡೆಗೆ ಡಿಕೆಶಿ(DK Shivakumar) ಮುಹೂರ್ತ ಫಿಕ್ಸ್ ಮಾಡಿದ್ದಾರೆ. ಸಂಸದರು, ಶಾಸಕರಿಗೆ ಈ ಸಲ ಗಾಳ ಹಾಕಿದ್ದಾರೆ ಎನ್ನಲಾಗ್ತಿದೆ. ಕೋ ಆಪರೇಷನ್ ಹೆಸರಲ್ಲಿ ಆಪರೇಷನ್ ಶುರುಮಾಡಿರುವ ಡಿಕೆ ಲೋಕಸಭೆ(Loksabha) ಗೆಲ್ಲೋಕೆ ಸಹಕಾರ ನೀಡುವಂತೆ ಪಕ್ಷಕ್ಕೆ ಬರೋರ ಜೊತೆ ಒಪ್ಪಂದ ಮಾಡಿಕೊಳ್ತಿದ್ದಾರೆ ಅಂತೆ.ಜಿಲ್ಲಾಧ್ಯಕ್ಷರಿಗೂ ಡಿಸಿಎಂ ಡಿಕೆ ಶಿವಕುಮಾರ್ ಗಾಳ ಹಾಕಿದ್ದಾರೆ ಎನ್ನಲಾಗ್ತಿದೆ. ಪಕ್ಷ ಸೇರ್ಪಡೆ ಕಾರ್ಯಕ್ರಮ ಜೀವಂತವಾಗಿಡಲು ಡಿಕೆ ಪ್ಲಾನ್ ಮಾಡಿದ್ದಂತೆ ಕಾಣುತ್ತಿದೆ. ಮಹಾರಾಷ್ಟ್ರ ಮಾದರಿ ಆಪರೇಷನ್‌ಗೆ ಕಾಂಗ್ರೆಸ್ ಸ್ಕೆಚ್ ಹಾಕಿದ್ದಂತೆ ಕಾಣುತ್ತಿದ್ದು, ಶಿವಸೇನೆ, ಎನ್ಸಿಪಿ ರೀತಿ ಶಾಸಕರನ್ನ ಸೆಳೆಯೋಕೆ ಪ್ಲ್ಯಾನ್ ಮಾಡಲಾಗಿದೆ. 

ಇದನ್ನೂ ವೀಕ್ಷಿಸಿ: ಮೊದಲು ಜಾಮೂನು..ಆಮೇಲೆ ವಿಷ, ಸಿಎಂ, ಡಿಸಿಎಂ ಭೇಟಿಯಾದ್ರೆ ತಪ್ಪೇನು?: ಎಸ್‌ ಟಿ ಸೋಮಶೇಖರ್

Related Video