Asianet Suvarna News Asianet Suvarna News

ಮೊದಲು ಜಾಮೂನು..ಆಮೇಲೆ ವಿಷ, ಸಿಎಂ, ಡಿಸಿಎಂ ಭೇಟಿಯಾದ್ರೆ ತಪ್ಪೇನು?: ಎಸ್‌ ಟಿ ಸೋಮಶೇಖರ್

‘ಅನುದಾನಕ್ಕಾಗಿ ಸಿಎಂ, ಡಿಸಿಎಂ ಭೇಟಿಯಾದ್ರೆ ತಪ್ಪೇನು..?’
‘ಯಡಿಯೂರಪ್ಪ ಅವರನ್ನ ನಂಬಿ ಬಿಜೆಪಿ ಪಕ್ಷದಲ್ಲಿ ಇದ್ದೇನೆ’
‘ಆದ್ರೆ ಬಿಜೆಪಿಗರೇ ನನ್ನನ್ನ ಓಡಿಸುವ ಕೆಲಸ ಮಾಡ್ತಿದ್ದಾರೆ..!’

ಶಾಸಕ ಎಸ್‌ ಟಿ ಸೋಮಶೇಖರ್ ಅಸಮಾಧಾನ ಮತ್ತೆ ಸ್ಫೋಟವಾಗಿದೆ. ನಾನು ಕಾಂಗ್ರೆಸ್‌ನಲ್ಲಿದ್ದೆ(Congress), ಬಿಜೆಪಿಗರು(BJP) ಪಕ್ಷಕ್ಕೆ ಸೇರಿಸಿಕೊಂಡ್ರು. ಬಿಜೆಪಿ ಪಕ್ಷ ಸೇರುವಾಗ, ನಮಗೆ ಜಾಮೂನು ಕೊಡುತ್ತಾರೆ. ಅಧಿಕಾರ ಮುಗಿದ ಮೇಲೆ, ಬಿಜೆಪಿಗರು ವಿಷ ಕೊಡುತ್ತಾರೆ ಎಂದು ಎಸ್‌.ಟಿ. ಸೋಮಶೇಖರ್‌(ST Somashekhar) ಹೇಳಿದ್ದಾರೆ. ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರನ್ನು ನಂಬಿ ನಾನು ಇನ್ನೂ ಬಿಜೆಪಿಯಲ್ಲಿ ಇದ್ದೇನೆ. ಅನುದಾನಕ್ಕಾಗಿ ಸಿಎಂ, ಡಿಸಿಎಂ ಭೇಟಿಯಾದ್ರೆ ತಪ್ಪೇನು? ನನ್ನ ಬೆಂಬಲಿಗರು ಮಾತ್ರ ಕಾಂಗ್ರೆಸ್‌ ಪಕ್ಷಕ್ಕೆ ಸೇರಿಲ್ಲ. ಅಶೋಕ್, ಮುನಿರತ್ನ ಕ್ಷೇತ್ರದಲ್ಲಿ ಕಾಂಗ್ರೆಸ್ ಸೇರಿಲ್ಲವಾ ಎಂದು ಎಸ್‌.ಟಿ ಸೋಮಶೇಖರ್ ಪ್ರಶ್ನಿಸಿದ್ದಾರೆ. ಇನ್ನೂ ಕೆ.ಎಸ್‌. ಈಶ್ವರಪ್ಪ ಮಾತನಾಡಿ, ಸೋಮಶೇಖರ್ ಪಾರ್ಟಿ ಬಿಟ್ಟು ಹೋಗಿ ಎಂದಿಲ್ಲ. ನನಗೆ ಸೋಮಶೇಖರ್ ಟೀಕಿಸುವ ಉದ್ದೇಶ ಇಲ್ಲ. ಅಧಿಕಾರಕ್ಕೆ ಬಂದಿದ್ದರೆ ನೀವು ಹೀಗೆ ಮಾತಾಡ್ತಿದ್ದರಾ? ಎಂದು ಕೇಳಿದ್ದಾರೆ.

ಇದನ್ನೂ ವೀಕ್ಷಿಸಿ:  ಜಾತಿ ಗಣತಿ ಪರ ಅಮಿತ್ ಶಾ ಬ್ಯಾಟಿಂಗ್: ಈ ಬಗ್ಗೆ ಕೇಂದ್ರ ಗೃಹ ಸಚಿವರು ಹೇಳಿದ್ದೇನು ?

Video Top Stories