Watch Video: ಒಕ್ಕಲಿಗರ ಕೋಟೆಯ ಮೇಲೆ ಡಿಕೆಶಿ, ಹೆಚ್‌ಡಿಕೆ ಕಣ್ಣು..!ವಿಧಾನಸಭಾ ಡ್ರೆಂಡ್ ಇಲ್ಲೂ ಮುಂದುವರೆಯುತ್ತಾ..?
ರಾಜ್ಯದಲ್ಲಿ ಏಪ್ರಿಲ್ 26 ಮೊದಲ ಹಂತದ ಚುಣಾವಣೆ
ಮತದಾನ ನಡೆಯುವ 14 ಕ್ಷೇತ್ರಗಳಲ್ಲೂ ಒಕ್ಕಲಿಗರ ಬಲ
ಡಿಕೆಶಿ ಒಕ್ಕಲಿಗ ಟ್ರಂಪ್ ಕಾರ್ಟ್ ಇಲ್ಲೂ ವರ್ಕ್ ಆಗುತ್ತಾ..?
ಲೋಕಸಭಾ ಚುಣಾವಣೆಗೆ ದಿನಗಳು ಹತ್ತಿರವಾಗುತ್ತಿವೆ. ಎಲ್ಲ ಪಕ್ಷಗಳ ಪ್ರಚಾರ ಜೋರಾಗಿದೆ. ಗೆಲುವಿನ ಲೆಕ್ಕಾಚಾರದಲ್ಲಿ ಎಲ್ಲರೂ ಶಕ್ತಿ ಮೀರಿ ಪ್ರಯತ್ನ ಮಾಡುತ್ತಿದ್ದಾರೆ. ದೇಶದಲ್ಲಿ ಏಳು ಹಂತದಲ್ಲಿ ನಡೆಯಲಿರುವ ಚುನಾವಣೆ, ರಾಜ್ಯದಲ್ಲಿ ಎರಡು ಹಂತಗಳಲ್ಲಿ ಮುಗಿಯಲಿದೆ. ಮೊದಲನೇ ಹಂತ ಇದೇ ಏಪ್ರಿಲ್ 26ರಂದು ಮತದಾನ(Voting) ನಡೆಯಲಿದೆ. ಈ ಮೊದಲ ಹಂತದ ಮತದಾನದ ಮೇಲೆ ಡಿಸಿಎಂ ಡಿಕೆ ಶಿವಕುಮಾರ್(DK Shivakumar) ಮತ್ತು ಎಚ್ಡಿ ಕುಮಾರಸ್ವಾಮಿ(HD Kumaraswamy) ವಿಶೇಷ ಕಣ್ಣಿಟ್ಟಿದ್ದಾರೆ. ಮೊದಲನೇ ಹಂತ ಏಪ್ರಿಲ್ 26 ರಂದು ದಕ್ಷಿಣ ಕರ್ನಾಟಕ ಭಾಗದಲ್ಲಿ ನಡೆಯಲಿದೆ. ಎರಡನೇ ಹಂತ ಮೇ. 7 ರಂದು ಉತ್ತರ ಕರ್ನಾಟಕ ಭಾಗದಲ್ಲಿ ನಡೆಯಲಿದೆ. ಕಾಂಗ್ರೆಸ್(Congress) ಮತ್ತು ಜೆಡಿಎಸ್(JDS) ಪಕ್ಷಗಳು ಮೊದಲ ಹಂತದಲ್ಲಿ ನಡೆಯುತ್ತಿರುವ ಚುನಾವಣೆ ಮೇಲೆ ವಿಶೇಷ ಕಣ್ಣಿಟ್ಟಿವೆ. ಅದರಲ್ಲೂ ಡಿಕೆಶಿ ಮತ್ತು ಎಚ್ಡಿಕೆ ಮೊದಲ ಹಂತದಲ್ಲಿ ನಡೆಯುವ 14 ಕ್ಷೇತ್ರಗಳ ಮೇಲೆ ವಿಶೇಷ ಆಸಕ್ತಿ ವಹಿಸಿದ್ದಾರೆ. ಯಾಕೆಂದ್ರೆ ಈ 14 ಕ್ಷೇತ್ರಗಳು ಸಹ ಒಕ್ಕಲಿಗರೇ ವೋಟ್ಗಳೇ ನಿರ್ಣಾಯಕವಾಗಿರುವ ಕ್ಷೇತ್ರಗಳು. ಹೀಗಾಗಿ ಡಿಕೆಶಿ ಮತ್ತು ಎಚ್ಡಿಕೆ ಮೊದಲ ಹಂತದ ಮತದಾನದ ಮೇಲೆ ವಿಶೇಷ ಕಾಳಜಿ ವಹಿಸಿದ್ದಾರೆ. ಮೊದಲ ಹಂತದಲ್ಲಿ ನಡೆಯುವ ಮತದಾನದ 14 ಕ್ಷೇತ್ರಗಳು ಯಾವೆಂದು ನೋಡುವುದಾದ್ರೆ, ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ಸೆಂಟ್ರಲ್. ಈ ಹದಿನಾಲ್ಕು ಕ್ಷೇತ್ರಗಳಲ್ಲಿ ಮೊದಲ ಹಂತದ ಚುನಾವಣೆ ನಡೆಯಲಿದೆ. ಈ ಹದಿನಾಲ್ಕು ಕ್ಷೇತ್ರಗಳಿಂದ ಒಟ್ಟು 358 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ.
ಇದನ್ನೂ ವೀಕ್ಷಿಸಿ: ಲಾಲ್ ಬಹದ್ದೂರ್ ಶಾಸ್ತ್ರಿಜೀ ಆ ದಿನ ಫೋನ್‌ನಲ್ಲಿ ಹೇಳಿದ್ದೇನು? ಇಂಡೋ-ಪಾಕ್ ಯುದ್ಧದ ಪರಿಣಾಮವೇನು ?