ಗೆದ್ದ ಮೇಲೂ ವಿಶ್ರಾಂತಿಯಿಲ್ಲ..ಹೈಪರ್ ಆಕ್ಟೀವ್ ಡಿಕೆಶಿ..! : ನೋ ರೆಸ್ಟ್..ಓನ್ಲಿ ವರ್ಕ್..ಡಿಸಿಎಂ ಸೂಚನೆ..!

ಡಿಕೆ ಶಿವಕುಮಾರ್‌ ಟಾರ್ಗೆಟ್ 2024ರ ಲೋಕಸಭೆ..!
ಲೋಕ ಗೆಲ್ಲಲು ಏನು ಸಮರವೀರನ ರಣತಂತ್ರ..?
ಡಿಕೆಶಿ ಮುಂದಿದೆ ಹಲವು ಸವಾಲುಗಳ ಸರತಿ ಸಾಲು
 

Share this Video
  • FB
  • Linkdin
  • Whatsapp

ಕರ್ನಾಟಕ ಕುರುಕ್ಷೇತ್ರ ಗೆದ್ದ ಖುಷಿಯಲ್ಲಿರೋ ಕಾಂಗ್ರೆಸ್ ಮುಂಬರುವ ಎಲ್ಲಾ ಚುನಾವಣೆಗಳನ್ನ ಗೆಲ್ಲುವ ರಣೋತ್ಸಾಹವನ್ನ ಕೊಂಚವೂ ತಗ್ಗಿಸಿಕೊಂಡಿಲ್ಲ. 2023ರ ಚುನಾವಣೆಯ ಮ್ಯಾನ್ ಆಫ್ ದಿ ಮ್ಯಾಚ್ ಯಾರು ಅಂತ ಕೇಳಿದ್ರೆ ಬರೋ ಉತ್ತರವೇ ಡಿ.ಕೆ. ಶಿವಕುಮಾರ್ ಅನ್ನೋದು. ಗೆದ್ದಾಯ್ತು, ಸಿಎಂ ಡಿಸಿಎಂ ಆಯ್ಕೆ ಆಯ್ತು, ಸಂಪುಟವೂ ರಚಿಸಿ ಮುಗೀತು. ಆದ್ರೂ ಡಿ.ಕೆ. ಶಿವಕುಮಾರ್ ಅವರಿಗೆ ರೆಸ್ಟ್ ಇಲ್ಲ. ವಿಧಾನಸಭೆಯನ್ನ ವಿನ್ ಆಗಿರೋ ಕಾಂಗ್ರೆಸ್ ಲೋಕಸಭೆ ಹಾಗೂ ಬಿಬಿಎಂಪಿ ಚುನಾವಣೆ ಮೇಲೆ ಕಣ್ಣಿಟ್ಟಿದೆ. ಡಿ.ಕೆ. ಶಿವಕುಮಾರ್ ಕ್ಯಾಪ್ಟನ್ ಜಾಗದಲ್ಲಿ ಕೂತು ಒಂದಿಷ್ಟು ಟಾಸ್ಕ್‌ಗಳನ್ನ ನೀಡಿದ್ದಾರೆ. ಡಿಕೆಶಿ ಪಕ್ಷದಲ್ಲಿನ ಭಿನ್ನಮತಗಳು ಹೊರಗೆ ಬಾರದಂತೆ ನೋಡಿಕೊಳ್ತಾರೆ. ಈಗ ಅವರಿಗೆ ಇನ್ನೊಂದು ದೊಡ್ಡ ಸವಾಲಿದೆ. ಅದೇ 2024ರ ಲೋಕಸಭಾ ಚುನಾವಣೆ ಗೆಲ್ಲುವುದಾಗಿದೆ.

ಇದನ್ನೂ ವೀಕ್ಷಿಸಿ: ಕರೆಂಟ್ ಫ್ರೀ ಕೊಟ್ಟು.. ರೇಟ್ ಜಾಸ್ತಿ ಮಾಡಿತಾ ಕಾಂಗ್ರೆಸ್..?: ಒಂದೇ ತಿಂಗಳ ಅಂತರದಲ್ಲಿ ಆಗಿದ್ದೇನೇನು..?

Related Video