ಡಿಕೆಶಿ ಸಿಎಂ ಆಗಲೆಂದು ಹರಕೆ: ತಿರುಪತಿಯಿಂದ ಲಾಡು ತಂದ ಅಭಿಮಾನಿ !

ಡಿ.ಕೆ. ಶಿವಕುಮಾರ್‌ ಸಿಎಂ ಆಗಲಿ ಎಂದು ಹರಕೆ ಕಟ್ಟಿ, ಅಭಿಮಾನಿಯೊಬ್ಬ ತಿರುಪತಿಯಿಂದ ಲಾಡನ್ನು ತಂದಿದ್ದಾನೆ.

First Published May 15, 2023, 11:43 AM IST | Last Updated May 15, 2023, 11:43 AM IST

ವಿಜಯನಗರ: ಡಿ.ಕೆ. ಶಿವಕುಮಾರ್‌ ಹುಟ್ಟುಹಬ್ಬ ಹಿನ್ನೆಲೆ ಅಭಿಮಾನಿಯೊಬ್ಬ ತಿರುಪತಿಯಿಂದ ಲಾಡು ತಂದಿದ್ದಾನೆ. ನಾರಾಯಣಮೂರ್ತಿ ಎಂಬುವವರು ವಿಜಯನಗರದಿಂದ ಲಾಡು ತಂದಿದ್ದಾರೆ. ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಲಿ ಎಂದು ಹರಕೆ ಕಟ್ಟಿ, ತಿರುಪತಿಯಿಂದ ಲಾಡನ್ನು ತರಲಾಗಿದೆ. ತಿರುಪತಿಯಿಂದ ಒಟ್ಟು 45 ಲಾಡನ್ನು ಅಭಿಮಾನಿ ತಂದಿದ್ದಾನೆ. ಇಂದು ಡಿಕೆಶಿ ಹುಟ್ಟುಹಬ್ಬವಿದ್ದು, ಅವರ ನಿವಾಸದ ಬಳಿ ಅಭಿಮಾನಿಗಳು ಸಿಹಿ ಹಂಚಿ ಸಂಭ್ರಮಿಸಿದರು. ಜೊತೆಗೆ 63 ಕೆಜಿ ತೂಕದ ಕೇಕ್‌ನನ್ನು ಡಿಕೆ ಅಭಿಮಾನಿಗಳು ತಂದಿದ್ದರು.

ಇದನ್ನೂ ವೀಕ್ಷಿಸಿ: ರಾಜಕೀಯದ ಬಗ್ಗೆ ಕೋಡಿಹಳ್ಳಿ ಶ್ರೀ ಹೇಳಿದ್ದೇನು? : ನಿಜವಾಯ್ತು ಭವಿಷ್ಯ !