Narendra Modi: ನಾಳೆ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ: ಮೈಸೂರಲ್ಲಿ ಮೈತ್ರಿ ಎಫೆಕ್ಟ್ ಏನು..?

ಮೈಸೂರು ಸಮಾವೇಶದಲ್ಲಿ ದೋಸ್ತಿ ನಾಯಕರು ಭಾಗಿಯಾಗಲಿದ್ದು, ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ದೇವೇಗೌಡರು ಒಂದೇ ವೇದಿಕೆಯಲ್ಲಿ ಇರಲಿದ್ದಾರೆ.

First Published Apr 13, 2024, 10:58 AM IST | Last Updated Apr 13, 2024, 10:59 AM IST

ರಾಜ್ಯದಲ್ಲಿ ಲೋಕಸಮರ ಅಖಾಡ ರಂಗೇರಿದ್ದು, ನಾಳೆ ರಾಜ್ಯಕ್ಕೆ ಪ್ರಧಾನಿ ಮೋದಿ(Narendra Modi) ಭೇಟಿ ನೀಡಲಿದ್ದಾರೆ. ಮೈಸೂರು, ಮಂಗಳೂರಲ್ಲಿ ನಮೋ ರಣಕಹಳೆ ಮೊಳಗಿಸಲಿದ್ದಾರೆ. ಅರಮನೆ ನಗರಿ ಮೈಸೂರು(Mysore) ಮತ್ತೊಂದು ಅಚ್ಚರಿಗೆ ಸಾಕ್ಷಿಯಾಗಲಿದೆ. ನಾಳೆ ಮೈಸೂರಲ್ಲಿ ಹಾಲಿ ಮತ್ತು ಮಾಜಿ ಪ್ರಧಾನಿಗಳ ಸಮಾಗಮ ಆಗಲಿದೆ. ಒಂದೇ ವೇದಿಕೆಯಲ್ಲಿ ಮಾಜಿ-ಹಾಲಿ ಪ್ರಧಾನಿಗಳ ಸಮಾಗಮ ಆಗಲಿದ್ದು, ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ದೇವೇಗೌಡರು(Devegowda) ಒಂದೇ ವೇದಿಕೆಯಲ್ಲಿ ಇರಲಿದ್ದು, ಇಬ್ಬರು ದಿಗ್ಗಜರ ಸಮ್ಮುಖದಲ್ಲಿ ನಾಳೆ ಬಿಜೆಪಿ(BJP) ಮಹಾ ಮತಬೇಟೆ ನಡೆಸಲಿದೆ. ಚಾಮರಾಜನಗರ, ಮೈಸೂರು, ಮಂಡ್ಯ, ಹಾಸನ ಕ್ಷೇತ್ರಗಳೇ ಟಾರ್ಗೆಟ್ ಆಗಿದೆ.

ಇದನ್ನೂ ವೀಕ್ಷಿಸಿ:  ರಾಮೇಶ್ವರಂ ಕೆಫೆ ಸ್ಫೋಟದ ಶಂಕಿತ ಉಗ್ರರು ಬೆಂಗಳೂರಿಗೆ ಶಿಫ್ಟ್: ನ್ಯಾಯಾಧೀಶರ ಮುಂದೆ ಹಾಜರು ಪಡಿಸಲು ಸಿದ್ಧತೆ

Video Top Stories