2019ರ ಸೋಲಿನ ಸೇಡು ತೀರಿಸಿಕೊಳ್ಳಲು ಎಚ್‌ಡಿಡಿ ಅಖಾಡಕ್ಕೆ! ಸೋಮಣ್ಣ ಪರ ಭರ್ಜರಿ ಪ್ರಚಾರಕ್ಕೆ ಇಳಿದ ದೊಡ್ಡ ಗೌಡರು

ಎರಡನೇ ಸಲ ತುಮಕೂರಿನಲ್ಲಿ ಎಚ್.ಡಿ ದೇವೇಗೌಡ ಪ್ರಚಾರ
2019ರ ಸೋಲಿನ ಸೇಡು ತೀರಿಸಿಕೊಳ್ಳಲು ಮುಂದಾದ ಎಚ್‌ಡಿಡಿ
ಸೋಮಣ್ಣನ ಗೆಲುವು ಮೂಲಕ ಸೇಡು ತೀರಿಸಿಕೊಳ್ಳಲು ಕಸರತ್ತು

Share this Video
  • FB
  • Linkdin
  • Whatsapp

ಲೋಕಸಭಾ ಚುನಾವಣೆ (Lok Sabha Elections) ಪ್ರಚಾರ ಜೋರಾಗಿದೆ. ತಮ್ಮ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಆಯಾ ಪಕ್ಷಗಳು ದೊಡ್ಡ ಮಟ್ಟದ ರೋಡ್‌ ಶೋ, ಪ್ರಚಾರ ಕಾರ್ಯಗಳನ್ನು ಮಾಡುತ್ತಿವೆ. ಈ ನಡುವೆ ಎರಡನೇ ಸಲ ತುಮಕೂರಿನಲ್ಲಿ(Tumakuru) ಎಚ್.ಡಿ ದೇವೇಗೌಡ (HD DeveGowda) ಅವರು ಪ್ರಚಾರಕ್ಕೆ ಇಳಿಯಲಿದ್ದಾರೆ. 2019ರ ಸೋಲಿನ ಸೇಡು ತೀರಿಸಿಕೊಳ್ಳಲು ಎಚ್‌ಡಿಡಿ ಮುಂದಾಗಿದ್ದು, ಅದನ್ನು ಸೋಮಣ್ಣ ಮೂಲಕ ಈಡೇರಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಹಾಸನ ಬಳಿಕ ತುಮಕೂರನ್ನು ಅವರು ಪ್ರತಿಷ್ಟೆಯಾಗಿ ತೆಗೆದುಕೊಂಡಿದ್ದು, ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣರನ್ನು(V Somamma) ಗೆಲ್ಲಿಸುವಂತೆ ಮತದಾರರಿಗೆ ಮನವಿ ಮಾಡುತ್ತಿದ್ದಾರೆ. ಗೃಹ ಸಚಿವರ ತವರು ಕ್ಷೇತ್ರವಾದ ಕೊರಟಗೆರೆಯಲ್ಲಿಯೇ ಈ ಪ್ರಚಾರ ಸಭೆ ನಡೆಯಲಿದ್ದು, ತುಮಕೂರು ಗ್ರಾಮಾಂತರ ಕ್ಷೇತ್ರದ ಊರ್ಡಿಗೆರೆಯಲ್ಲೂ ಪ್ರಚಾರ ಮಾಡಲಾಗುತ್ತದೆ. ಇದಾದ ನಂತರದಲ್ಲಿ ಸಂಜೆ ತುಮಕೂರು ನಗರದಲ್ಲಿ ಮತಯಾಚನೆ ಮಾಡಲಿದ್ದಾರೆ. ಇನ್ನು ರಾತ್ರಿ ತುಮಕೂರಿನಲ್ಲೇ ಎಚ್.ಡಿ ದೇವೇಗೌಡ ಅವರು ವಾಸ್ತವ್ಯ ಹೂಡಲಿದ್ದು, ನಾಡಿದ್ದು‌ ಮಧುಗಿರಿಯಲ್ಲಿ ಪ್ರಚಾರ ಮಾಡಲಿದ್ದಾರೆ.

ಇದನ್ನೂ ವೀಕ್ಷಿಸಿ: 2000 ಜನ ಸೇರಿದ್ರು ಅಂದ್ರೆ ಯಾರು ನಂಬ್ತಾರೆ? ವಿವೇಕ್ ಹೆಬ್ಬಾರ್ ಜತೆ ಅಷ್ಟು ಜನ ಎಲ್ಲಿಂದ ಬಂದ್ರು? ದೇಶಪಾಂಡೆ ಪ್ರಶ್ನೆ

Related Video