2000 ಜನ ಸೇರಿದ್ರು ಅಂದ್ರೆ ಯಾರು ನಂಬ್ತಾರೆ? ವಿವೇಕ್ ಹೆಬ್ಬಾರ್ ಜತೆ ಅಷ್ಟು ಜನ ಎಲ್ಲಿಂದ ಬಂದ್ರು? ದೇಶಪಾಂಡೆ ಪ್ರಶ್ನೆ
ಕಾರವಾರ ಕಾಂಗ್ರೆಸ್‌ನಲ್ಲೂ ಭುಗಿಲೆದ್ದ ಅಸಮಾಧಾನ
ವಿವೇಕ್ ಹೆಬ್ಬಾರ್ ವಿರುದ್ಧ ಆರ್.ವಿ.ದೇಶಪಾಂಡೆ ಕಿಡಿ
ಆರ್.ವಿ. ದೇಶಪಾಂಡೆ ನೇತೃತ್ವದಲ್ಲಿ ಕಾಂಗ್ರೆಸ್ ಸಭೆ
ಕಾರವಾರ ಕಾಂಗ್ರೆಸ್‌ನಲ್ಲೂ ಅಪಸ್ವರ ಶುರುವಾಗಿದ್ದು, ವಿವೇಕ್ ಹೆಬ್ಬಾರ್(Vivek Hebbar) ಸೇರ್ಪಡೆಗೆ ಅಸಮಾಧಾನ ಆರ್.ವಿ.ದೇಶಪಾಂಡೆ(RV Deshpande) ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿವೇಕ್ ಹೆಬ್ಬಾರ್ ಸೇರ್ಪಡೆಯಿಂದ ಕಾಂಗ್ರೆಸ್‌ನಲ್ಲಿ(Congress) ಶೀತಲ ಸಮರ ಸಮರ ಶುರುವಾದಂತೆ ಕಾಣುತ್ತಿದೆ. ಮೂಲ ಹಾಗೂ ವಲಸಿಗರ ನಡುವೆ ಮುಸುಕಿನ ಗುದ್ದಾಟ ಏರ್ಪಟ್ಟತ್ತಿದೆ. ಶಾಸಕ ಆರ್.ವಿ.ದೇಶಪಾಂಡೆ ನೇತೃತ್ವದಲ್ಲಿ ಕಾಂಗ್ರೆಸ್ ಸಭೆ ನಡೆಸಿದ್ದು, ಮುಂಡಗೋಡದಲ್ಲಿ ನಡೆದ ಸಭೆಯಲ್ಲಿ ವಿವೇಕ್ , ಬೆಂಬಲಿಗರು ಗೈರಾಗಿದ್ದಾರು. ಹೆಬ್ಬಾರ್ ಪುತ್ರನ ಜತೆ ಸಾವಿರಾರು ಬೆಂಬಲಿಗರು ಸೇರ್ಪಡೆಗೆ ಟಾಂಗ್ ನೀಡಿದ್ದು, ಮುಂಡಗೋಡದ ಸಭಾಂಗಣದಲ್ಲಿ 500ಜನ ಕೂರೋಕಾಗಲ್ಲ. 2000 ಜನ ಸೇರಿದ್ರು ಅಂದ್ರೆ ಯಾರು ನಂಬ್ತಾರೆ ?, ವಿವೇಕ್ ಹೆಬ್ಬಾರ್ ಜತೆ ಸಾವಿರಾರು ಜನ ಎಲ್ಲಿಂದ ಬಂದ್ರು ? ’ನಾವು ದೊಡ್ಡ ಸಭೆ ಮಾಡಿದಾಗಲೇ ಸಾವಿರಾರರು ಜನ ಇರಲ್ಲ ಎಂದು ಹೇಳುವ ಮೂಲಕ ಬೆಂಬಲಿಗರ ಜತೆ ವಿವೇಕ್ ಹೆಬ್ಬಾರ್ ಸೇರ್ಪಡೆ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಇದನ್ನೂ ವೀಕ್ಷಿಸಿ: Modi campaign: ಮೈಸೂರು ಭಾಗದಲ್ಲಿ ದೋಸ್ತಿಗೆ ಸಿಗುತ್ತಾ ಮೈತ್ರಿ ಬಲ? ಕರಾವಳಿಯಲ್ಲಿ ಜಾತಿ ರಾಜಕಾರಣಕ್ಕೆ ಬಿತ್ತಾ ಫುಲ್ ಸ್ಟಾಪ್?