Asianet Suvarna News Asianet Suvarna News

ಅಣ್ಣಾಮಲೈಗೆ ಸಿಕ್ಕಿದೆ ಅಮಿತ ಬಲ: 6 ತಿಂಗಳಲ್ಲಿ ಬದಲಾಗುತ್ತಾ ದ್ರಾವಿಡ ರಾಜ್ಯದ ರಾಜಕೀಯ!?

ತಮಿಳುನಾಡಲ್ಲಿ ಶುರುವಾಯ್ತು ಕೇಸರಿ ಹವಾ!
ದ್ರಾವಿಡ ನಾಡಲ್ಲಿ ಅರಳುತ್ತಾ ಕಮಲ..?
ಅಣ್ಣಾಮಲೈ ದಿಟ್ಟ ಹೆಜ್ಜೆಗೆ ಭರ್ಜರಿ ಸ್ವಾಗತ!
 

ತಮಿಳುನಾಡಲ್ಲಿ ಹಿಂದೊಮ್ಮೆ ಸುನಾಮಿ ಸೃಷ್ಟಿಯಾಗಿದ್ದನ್ನ, ಯಾರೂ ಯಾವ ಕ್ಷಣಕ್ಕೂ ಮರೆಯೋ ಹಾಗೇ ಇಲ್ಲ. ಈಗ ಅದೇ ತಮಿಳುನಾಡಲ್ಲಿ(Tamilnadu) ಮತ್ತೊಂದು ಸುನಾಮಿ ಭುಗಿಲೆದ್ದಿದೆ. ಆದ್ರೆ ಇದು ರಾಜಕೀಯ ಸುನಾಮಿ. ಕೇಸರಿ ಅಲೆ ಅಬ್ಬರಿಸುವಂತೆ ಮಾಡೋ ಸುನಾಮಿ. ಈ ಸುನಾಮಿ ತಮಿಳುನಾಡಿನ ರಾಜಕೀಯವನ್ನೇ(politics) ಬುಡಮೇಲಾಗಿಸುತ್ತೆ ಅನ್ನೋ ಸುದ್ದಿ ಸದ್ದು ಮಾಡ್ತಾ ಇದೆ. ಅದಕ್ಕೆ ಕಾರಣವಾಗಿರೋದು, ಪದ್ಮಪಾಳಯದ ತಮಿಳುನಾಡಿನ ತಲೈವರ್, ಅಣ್ಣಾಮಲೈ(Annamalai). ಎನ್ ಮಣ್, ಎನ್ ಮಕ್ಕಳ್. ಅಂದ್ರೆ, ನನ್ನ ನೆಲ, ನನ್ನ ಜನ ಅಂತ.. ಇಂಥದ್ದೊಂದು ಹೆಸರಿಟ್ಟು, ಪಾದಯಾತ್ರೆಗೆ ಹೆಜ್ಜೆ ಇಟ್ಟಿದ್ದಾರೆ ಅಣ್ಣಾಮಲೈ. ಈ ಕಾರ್ಯಕ್ರಮಕ್ಕೆ ಚಾಲನೆ ನೀಡೋಕೆ, ಕೇಂದ್ರ ಗೃಹಮಂತ್ರಿ ಅಮಿತ್ ಶಾ ಅವರೇ ಭಾಗವಿಸಿದ್ರು. ಒಟ್ಟಾರೆ, ಕೇಸರಿ ಪಡೆ ಅತಿ ದೊಡ್ಡ ಪ್ಲಾನ್ ಮಾಡ್ಕೊಂಡೇ ತಮಿಳುನಾಡಿನ ರಣಾಂಗಣಕ್ಕೆ ಕಾಲಿಟ್ಟಿದೆ. 

ಇದನ್ನೂ ವೀಕ್ಷಿಸಿ:  ಉಡುಪಿ ವಿಡಿಯೋ ಪ್ರಕರಣ: ಮೂವರು ಮುಸ್ಲಿಂ ವಿದ್ಯಾರ್ಥಿನಿಯರಿಗೆ ಟಿಸಿ ಕೊಡುತ್ತಾ ಕಾಲೇಜು..?